'ಕೆಜಿಎಫ್ ಚಾಪ್ಟರ್ 2' ಇನ್ನು ಅಮೆಜಾನ್ ಪ್ರೈಮ್ ನಲ್ಲಿ ಬಾಡಿಗೆಗೆ ಲಭ್ಯ - Mahanayaka
9:05 AM Thursday 12 - December 2024

‘ಕೆಜಿಎಫ್ ಚಾಪ್ಟರ್ 2’ ಇನ್ನು ಅಮೆಜಾನ್ ಪ್ರೈಮ್ ನಲ್ಲಿ ಬಾಡಿಗೆಗೆ ಲಭ್ಯ

kgf 2
17/05/2022

ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿರುವ ‘ಕೆಜಿಎಫ್ ಚಾಪ್ಟರ್ 2’ ಗೆಲುವಿನ ಸಂಭ್ರಮ ಮುಂದುವರೆದಿದೆ.  ಈ ವರ್ಷದ ಪ್ಯಾನ್ ಇಂಡಿಯನ್ ಸೂಪರ್ ಹಿಟ್ ಚಲನಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋ, OTT ಪ್ಲಾಟ್‌ಫಾರ್ಮ್‌ ನಲ್ಲಿ ಮೇ 16 ರಿಂದ ಬಾಡಿಗೆಗೆ ಲಭ್ಯವಿರುತ್ತದೆ.  ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ಬಿಡುಗಡೆಗೂ ಮುನ್ನ ಆನ್‌ ಲೈನ್‌ ನಲ್ಲಿ ಚಲನಚಿತ್ರವನ್ನು ವೀಕ್ಷಿಸುವ ಅವಕಾಶವನ್ನು ನೀಡುತ್ತದೆ.

ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್  ನಲ್ಲಿ ಹಲವಾರು ದಾಖಲೆಗಳನ್ನು ಮುರಿಯುತ್ತಿದೆ. 2022 ರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿರುವ KGF 2 ವನ್ನು ಈಗಲೇ ನೀವು ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು

ಅಮೆಜಾನ್ ಪ್ರೈಮ್ ​ನಲ್ಲಿ ಕೆಜಿಎಫ್ ಚಾಪ್ಟರ್ 2 ವೀಕ್ಷಿಸಬಹುದಾಗಿದೆ. ಆದರೆ ಈಗಲೇ ಕೆಜಿಎಫ್ ಚಾಪ್ಟರ್​ 2ವನ್ನು ಅಮೆಜಾನ್ ಪ್ರೈಮ್​ನಲ್ಲಿ ವೀಕ್ಷಿಸಲು  ನೀವು ನಿಮ್ಮಲ್ಲಿರೋ ಪ್ರೈಮ್ ಮೆಂಬರ್​ಶಿಪ್ ಬಿಟ್ಟು ಬೇರೆ ಬಾಡಿಗೆ ನೀಡಬೇಕಾಗುತ್ತದೆ.

ಅಮೆಜಾನ್ ಪ್ರೈಮ್​ ‘ಚಲನಚಿತ್ರ ಬಾಡಿಗೆ’ ಯೋಜನೆಯ ಭಾಗವಾಗಿ Amazon Prime ವೀಡಿಯೊದಲ್ಲಿ ಕೆಜಿಎಫ್ ಚಾಪ್ಟರ್ 2 ಲಭ್ಯವಿದೆ. ಪ್ಲಾಟ್‌ ಫಾರ್ಮ್‌ ನಲ್ಲಿ ಅಭಿಮಾನಿಗಳು ಚಲನಚಿತ್ರವನ್ನು ರೂ. 199 ಗೆ ಬಾಡಿಗೆಗೆ ಪಡೆಯಬಹುದು. ಕೆಜಿಎಫ್ 2 ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಕ್ಸಿಜನ್ ಸಹಾಯವಿಲ್ಲದೆ ಎವರೆಸ್ಟ್ ಏರಿದ ಮೊದಲ ವೈದ್ಯ ದಂಪತಿಗಳು! 

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ನಿವಾಸಗಳ ಮೇಲೆ ಸಿಬಿಐ ದಾಳಿ

ಇನ್ನು ಮುಂದೆ ಬೆಳಗ್ಗೆ 6 ಗಂಟೆಗೆ ಆಜಾನ್ ಕೂಗಲು ನಿರ್ಧಾರ!

ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸಿ.ಹೆಚ್.ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ

ಕ್ವಾರಿ ದುರಂತ: ಬಂಡೆ ಉರುಳಿ ಬಿದ್ದು 3 ಮಂದಿ ಸಾವು, ಹಿಟಾಚಿಯೊಳಗೆ ಸಿಲುಕಿರುವ ಚಾಲಕ

 

ಇತ್ತೀಚಿನ ಸುದ್ದಿ