ಕೆಜಿಎಫ್ ಚಿತ್ರದ ಪ್ರಭಾವದಿಂದ ಸಿಗರೇಟ್ ಸೇದಿದ ಬಾಲಕ ಅಸ್ವಸ್ಥ
ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾದಿಂದ ಪ್ರಭಾವಿತನಾದ ಬಾಲಕನೊಬ್ಬ ಒಂದು ಪ್ಯಾಕ್ ಸಿಗರೇಟ್ ಸೇದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಆಸ್ಪತ್ರೆ ಸೇರಿದ ಬಾಲಕನಿಗೆ ಚಿಕಿತ್ಸೆ ನೀಡಿದ ಬಳಿಕ ಬಾಲಕ ಚೇತರಿಸಿಕೊಂಡಿದ್ದಾನೆ. ಕೆ.ಜಿ.ಎಫ್ ನಾಯಕ ಯಶ್ ಪ್ರಭಾವದಿಂದಾಗಿ ಬಾಲಕ ಸಿಗರೇಟ್ ಸೇದಿದ್ದಾನೆ ಎನ್ನಲಾಗಿದೆ. ನಂತರ ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಾಲಕನಿಗೆ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಜನೆ ನೀಡಲಾಗಿದ್ದು ಬಾಲಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ವಾಸಕೋಶ ತಜ್ಞ ಡಾ.ರೋಹಿತ್ ರೆಡ್ಡಿ ಪಥೂರಿ, ಸಿನಿಮಾಗಳು ನಮ್ಮ ಸಮಾಜದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. ಸಿಗರೇಟು ಸೇದುವುದು, ತಂಬಾಕು ಜಗಿಯುವುದು, ಮದ್ಯಪಾನದಂತಹ ದೃಶ್ಯಗಳನ್ನು ವೈಭವೀಕರಿಸಬಾರದು. ಆದ್ದರಿಂದ ಸಿನಿಮಾ ನಟರು, ಚಿತ್ರ ನಿರ್ಮಾಪಕರು ಇಂತಹ ವಿಚಾರಗಳಲ್ಲಿ ಎಚ್ಚರಿಕೆವಹಿಸಬೇಕು ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಜಕೀಯ ನಾಯಕರ ಭದ್ರತಾ ಬೆಂಗಾವಲು ಹಿಂಪಡೆದ ಪಂಜಾಬ್ ಸರ್ಕಾರ
100 ವರ್ಷಗಳಷ್ಟು ಹಳೆಯ ಮಸೀದಿಗಳ ರಹಸ್ಯ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ
ವಿದ್ಯಾರ್ಥಿ ಮೇಲೆ ಕಾಡು ಹಂದಿ ದಾಳಿ
ಒಂದೆಲಗ ಸೇವನೆಯಿಂದ ಪಡೆಯಿರಿ ಈ ಅದ್ಭುತ ಪ್ರಯೋಜನಗಳು
ಬಾವಿ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು!