ಸುಪ್ರಭಾತ ಅಭಿಯಾನ: ಖಡಕ್ ಎಚ್ಚರಿಕೆ ನೀಡಿದ ಸಚಿವ ಅರಗ ಜ್ಞಾನೇಂದ್ರ
ಬೆಂಗಳೂರು: ಮಸೀದಿಗಳ ಮೈಕ್ ತೆರವುಗೊಳಿಸಲು ಒತ್ತಾಯಿಸಿ ಶ್ರೀರಾಮ ಸೇನೆ ಇಂದು ಸುಪ್ರಭಾತ ಅಭಿಯಾನ ಆರಂಭಿಸಿದೆ. ಇದೇ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಕಾನೂನು ಕೈಗೆತ್ತಿಕೊಂಡರೆ, ಕಠಿಣ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಅರಗ ಜ್ಞಾನೇಂದ್ರ ಶ್ರೀರಾಮ ಸೇನೆ ಅಭಿಯಾನದ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಸೀದಿಗಳ ಮೈಕ್ ತೆರವಿಗೆ ಆಗ್ರಹಿಸಿ ಇಂದು ಕೆಲವು ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ, ಮಂತ್ರಪಠಣ ಆರಂಭವಾಗಿದ್ದು, ಈ ನಡುವೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಗೃಹ ಸಚಿವರು, ಶಬ್ದಮಾಲಿನ್ಯ ನಿಯಂತ್ರಿಸಲು ಕೋರ್ಟ್ ಆದೇಶವಿದೆ. ಕೋರ್ಟ್ ಆದೇಶವನ್ನು ಎಲ್ಲರೂ ಪಾಲೀಸಬೇಕು. ನ್ಯಾಯಾಲಯದ ಆದೇಶ ಮೀರಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.’
ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಡ್ರಾಮ ದಂಗಲ್: ಮೈಕ್ ತೆಗೆಸದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ | ಮುತಾಲಿಕ್ ಘೋಷಣೆ
ಅಮಾನವೀಯ ಘಟನೆ: ಸ್ಮಶಾನ ಅಗೆದು ವಿಕಲಚೇತನ ಬಾಲಕಿಯ ಮೃತದೇಹದ ಮೇಲೆ ಅತ್ಯಾಚಾರ
ಮಾನನಷ್ಟ ಮೊಕದ್ದಮೆ ಹಾಕಲು ಡಿ.ಕೆ.ಶಿವಕುಮಾರ್ ಗೆ ಮಾನ ಇದೆಯೇ? | ಯತ್ನಾಳ್ ಪ್ರಶ್ನೆ
ಮದುವೆಯ ಸುದ್ದಿ ಹರಡಿದವರಿಗೆ ಕಾಲಿನ ಫೋಟೋ ಹಾಕಿ ತಿರುಗೇಟು ನೀಡಿದ ಸಾಯಿ ಪಲ್ಲವಿ
ಕಡಬ ಚರ್ಚ್ ದಾಳಿ: ದೂರು ನೀಡಿದವರ ವಿರುದ್ಧವೇ ಸುಳ್ಳು ದೂರು | ಎಸ್ ಡಿಪಿಐ ಆಕ್ರೋಶ