12:12 PM Wednesday 12 - March 2025

ಖಾದರ್‌ಗೆ ಮೈಸೂರು ಇತಿಹಾಸ ಗೊತ್ತಿಲ್ಲ: ಸಂಸದ ಪ್ರತಾಪ್‌ ಸಿಂಹ

prathap simha
14/02/2022

ಮೈಸೂರು: ಉಳ್ಳಾಲದ‌ ಮುಲ್ಲಾ ಖಾದರ್‌ಗೆ, ಮೈಸೂರು ಇತಿಹಾಸದ ಬಗ್ಗೆ ಗೊತ್ತಿಲ್ಲ. ನಿಜವಾದ ಮೂರ್ಖತನ ಪ್ರದರ್ಶನ ಮಾಡುತ್ತಿರುವುದು ಖಾದರ್ ಎಂದು ಸಂಸದ ಪ್ರತಾಪ್‌ಸಿಂಹ ಕಾಂಗ್ರೆಸ್​ ಮುಖಂಡ ಯು.ಟಿ‌‌.ಖಾದರ್‌ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು. ಇವತ್ತು ಹಿಜಾಬ್ ಕೇಳುತ್ತಾರೆ, ನಾಳೆ ಬುರ್ಕಾ ಹಾಕೊಂಡು ಬರುತ್ತಾರೆ. ಶುಕ್ರವಾರ ಬಂದರೆ ಶಾಲೆಯಲ್ಲೇ ನಮಾಜ್ ಮಾಡುತ್ತೀವಿ ಅಂತಾರೆ. ಕ್ಲಾಸ್ ರೂಂ‌ನಲ್ಲಿ ಪ್ರೇಯರ್‌‌ ಹಾಲ್ ಕಟ್ಟಿಸಿಕೊಡಿ ಅಂತಾರೆ. ಮುಂದೊಂದು ದಿನ ದೇಶ ತುಂಡು ಮಾಡಿ ಅಂತಾರೆ. ಎಪ್ಪತ್ತು ವರ್ಷಗಳ ಹಿಂದೆ ಇವರೆಲ್ಲಾ ಇದನ್ನೇ ಮಾಡಿದ್ದು ಎಂದು ಕಿಡಿಕಾರಿದರು.

ಇನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆಯೊ ಇಲ್ಲವೋ. ಜಗತ್ತಿನ ಎಲ್ಲಾ ದೇಶಗಳಲ್ಲೂ ಸಮವಸ್ತ್ರ ಇದೆ. ಆ ಜಾತಿ, ಈ ಜಾತಿ , ಆ ಧರ್ಮ, ಈ ಧರ್ಮ ಅಂತ ಭೇದಭಾವ ಇಲ್ಲದೇ ಸಮಾನವಾಗಿ ಜ್ಞಾನಾರ್ಜಾನೆ ಮಾಡಲು ಸಮವಸ್ತ್ರ ಜಾರಿಗೊಳಿಸಿವೆ. ಇದನ್ನು ಅರ್ಥ ಮಾಡಿಕೊಳ್ಳುವ ಕನಿಷ್ಟ ಜ್ಞಾನ ಇಲ್ಲ ಅಂದರೆ ಅದು ಖಾದರ್, ಕಾಂಗ್ರೆಸ್ ಸಮಸ್ಯೆ. ಅದು‌ ನಮ್ಮ ಸಮಸ್ಯೆ ಅಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆ: ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ಮೋದಿ ಸರ್ಕಾರ ಕಿತ್ತೊಗೆಯುವ ಸಮಯ ಹತ್ತಿರವಾಗಿದೆ: ತೆಲಂಗಾಣ ಸಿಎಂ ಕೆಸಿಆರ್

ಆನ್‍ಲೈನ್ ಗೇಮಿಂಗ್ ನಿಷೇಧ: ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಹಿಜಾಬ್ ಧರಿಸದೇ ಇರುವುದರಿಂದ ಅತ್ಯಾಚಾರ ಹೆಚ್ಚುತ್ತಿದೆ | ಜಮೀರ್ ಅಹ್ಮದ್ ಹೇಳಿಕೆ

 

ಇತ್ತೀಚಿನ ಸುದ್ದಿ

Exit mobile version