ತಂದೆ ಕರೆನ್ಸಿ ಹಾಕಲಿಲ್ಲ ಎಂದು ಖಾಸಗಿ ಭಾಗಕ್ಕೆ ತ್ರಿಶೂಲದಿಂದ ಚುಚ್ಚಿಕೊಂಡ ಯುವಕ!
ಹುಬ್ಬಳ್ಳಿ: ಇದೇನು ಯುವ ಜನತೆಯೋ ತಿಳಿಯದು, ಯುವಕನೋರ್ವ ತನ್ನ ತಂದೆ ಕರೆನ್ಸಿ ಹಾಕಿಲು ಹಣ ನೀಡಲಿಲ್ಲ ಎಂಬ ಕೋಪದಲ್ಲಿ ತ್ರಿಶೂಲದಿಂದ ಖಾಸಗಿ ಭಾಗಕ್ಕೆ ಚುಚ್ಚಿಕೊಂಡ ಘಟನೆ ನಡೆದಿದೆ.
ನವಲೂರಿನ 20 ವರ್ಷದ ಮೈಲಾರಿ ತಿಪ್ಪಣ್ಣವರ ಎಂಬಾತ ಈ ವಿಲಕ್ಷಣ ವರ್ತನೆ ತೋರಿದ್ದು, ಮೊಬೈಲ್ ಕರೆನ್ಸಿ ಹಾಕಿಸುವಂತೆ ತಂದೆಗೆ ಈತ ಕೇಳಿದ್ದು, ಆದರೆ ತಂದೆ ಕರೆನ್ಸಿ ಹಾಕಿಸಿರಲಿಲ್ಲ ಎನ್ನಲಾಗಿದೆ. ಇಷ್ಟಕ್ಕೇ ಕೋಪಗೊಂಡ ಈತ ಮರ್ಮಾಂಗಕ್ಕೆ ತ್ರಿಶೂಲದಿಂದ ಚುಚ್ಚಿಕೊಂಡಿದ್ದು, ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಧಾರವಾಡ ತಾಲೂಕಿನ ನವಲೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ತಂದೆ ಕರೆನ್ಸಿ ಹಾಕಿಸುವುದಿಲ್ಲ ಎಂದಿದ್ದರಿಂದ ಕೋಪಗೊಂಡ ಮೈಲಾರಿ, ಗೊರಪ್ಪನ ಉಡುಪು ಹಾಕಿಕೊಂಡು ಜೊತೆಗೆ ತ್ರಿಶೂಲವನ್ನ ತೆಗೆದುಕೊಂಡು ಹೋಗಿ, ಖಾಸಗಿ ಜಾಗಕ್ಕೆ ಸಿಗಿಸಿಕೊಂಡು ನಿತ್ರಾಣವಾಗಿ ಬಿದ್ದಿದ್ದಾನೆ. ವಿಷಯ ತಿಳಿದು ಆತಂಕಗೊಂಡ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಋಷಿ ಕುಮಾರ ಸ್ವಾಮೀಜಿಗೆ ಮಸಿ ಬಳಿದ ಕಿಡಿಗೇಡಿಗಳು!
ಯೋಗ್ಯತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ಎಂಬಿಎ ಪದವೀಧರೆ ಆತ್ಮಹತ್ಯೆ
ನೋವಲ್ಲಿ ಧೈರ್ಯ ತುಂಬುವ, ಕಷ್ಟದಲ್ಲಿ ನೆರವಾಗುವ ದಾದಿಯರಿಗೆ ನಮನ