ಶಾರ್ಟ್ ಸರ್ಕ್ಯೂಟ್: ಖಾಸಗಿ ಬಸ್ ಬೆಂಕಿಗೆ ಆಹುತಿ

fire
23/02/2022

ಉಡುಪಿ: ಖಾಸಗಿ ಬಸ್ಸೊಂದು ಬೆಂಕಿ ತಗಲಿ ಸುಟ್ಟು ಕರಕಲಾದ ಘಟನೆ ಮಣಿಪಾಲದ ಟೈಗರ್ ಸರ್ಕಲ್ ಬಳಿ ಬುಧವಾರ ಮುಂಜಾನೆ ಸಂಭವಿಸಿದೆ.

ಬಳ್ಳಾರಿಯ ಕೊಟ್ಟೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಖಾಸಗಿ ಬಸ್, ಮಣಿಪಾಲದ ಟೈಗರ್ ಸರ್ಕಲ್ ಬಳಿ ಬರುತ್ತಿದ್ದಂತೆ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ.
ಪ್ರಾರಂಭದಲ್ಲಿ ಚಾಲಕನ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಯಿತು. ಈ ವೇಳೆ ಬಸ್‌ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಖ್ಯಾತ ಹಿರಿಯ ನಟಿ ಲಿಲಿತಾ ಇನ್ನಿಲ್ಲ: ಕಂಬನಿ ಮಿಡಿದ ಚಿತ್ರರಂಗ

ನಟ ಚೇತನ್ ಪೊಲೀಸ್ ವಶಕ್ಕೆ: ಚೇತನ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ | ಪತ್ನಿ ಮೇಘಾ ಆತಂಕ

ಪತ್ನಿ, ಅತ್ತೆಯನ್ನು ಮಚ್ಚಿನಿಂದ ಹೊಡೆದು ಕೊಂದ ಪಾಪಿ!

ಆರ್.ಜೆ.ರಚನಾ ಹೃದಯಾಘಾತದಿಂದ ನಿಧನ

ಇತ್ತೀಚಿನ ಸುದ್ದಿ

Exit mobile version