ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಿಕ್ಷಕರು ಬರಬೇಕು | ಸಚಿವ ಸುರೇಶ್ ಕುಮಾರ್ - Mahanayaka
3:48 AM Thursday 19 - September 2024

ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಿಕ್ಷಕರು ಬರಬೇಕು | ಸಚಿವ ಸುರೇಶ್ ಕುಮಾರ್

suresh kumar
26/05/2021

ಬೆಂಗಳೂರು: ಕಳೆದ ಹದಿನೈದು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಸಹಾಯ ಹಸ್ತವನ್ನು ಚಾಚಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.


ಶಿಕ್ಷಕರ‌ ಹಾಗೂ ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರೊಂದಿಗೆ ಶಿಕ್ಷಕರ ಮತ್ತು ಪದವಿಪೂರ್ವ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರೊಂದಿಗೆ ಇಂದು ಸಭೆ‌ ನಡೆಸಿದ ಸಚಿವರು, ಸರ್ಕಾರ‌ ಇಂತಹ ಸಂಕಷ್ಟದ‌ ಸಂದರ್ಭದಲ್ಲಿಯೂ ಸರ್ಕಾರಿ ಶಾಲಾ‌ ಶಿಕ್ಷಕರೂ ಸೇರಿದಂತೆ ಯಾವುದೇ ವರ್ಗಕ್ಕೂ ವೇತನ‌ ಭತ್ಯೆಗಳ ಕಡಿತಕ್ಕೆ ಮುಂದಾಗಿಲ್ಲ ಎಂದು ತಿಳಿಸಿದರು.

 


Provided by

ರಾಜ್ಯ ಸರ್ಕಾರದ‌ ಆರ್ಥಿಕ ಸ್ಥಿತಿಗತಿಗಳ‌ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗಾಗಿ ನಮ್ಮದೇ ಖಾಸಗಿ ಅನುದಾನರಹಿತ ಶಿಕ್ಷಕ‌ ಸಮುದಾಯದ ನೆರವಿಗೆ ಬರಬೇಕಾದ್ದು ನಮ್ಮ‌ ಜವಾಬ್ದಾರಿಯೆಂದು ತಿಳಿಯಬೇಕೆಂದು ಅವರು ಹೇಳಿದರು.

 

ಶಿಕ್ಷಕ ಪದವೀಧರ‌ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳು ತಮ್ಮೆಲ್ಲರಿಂದ ನಿರೀಕ್ಷಿಸುವ ವೇತನ ಮೊತ್ತವನ್ನು ನೀಡಲು ಮುಂದೆ ಬಂದಿದ್ದು, ಇದನ್ನು ಎಲ್ಲರೂ ಮಾದರಿಯಾಗಿ ಕಾಣಬೇಕಿದೆ. ಇಲಾಖೆಯ ಆಂತರಿಕ ಆರ್ಥಿಕ ಸಂಪನ್ಮೂಲಗಳನ್ನು ಬಳಸಲು ಸಹ ಆಲೋಚಿಸಲಾಗುತ್ತಿದ್ದು, ಸಂಪನ್ಮೂಲ‌ ಕ್ರೂಢೀಕರಣಕ್ಕೆ ಪ್ರಸ್ತಾವನೆ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

 

ಒಂದು ವೇಳೆ ಮುಂದಿನ‌ ದಿನಗಳಲ್ಲಿ ಸರ್ಕಾರಿ‌ ನೌಕರರ ವೇತನ ಕಟಾವಣೆ ಮಾಡುತ್ತೇವೆಂದು ಸರ್ಕಾರ‌ ನಿರ್ಧರಿಸಿದಲ್ಲಿ, ಈಗ ಶಿಕ್ಷಕರು ನೀಡಲು ಇಚ್ಛಿಸುವ ಮೊತ್ತವನ್ನು ವಿನಾಯ್ತಿ ನೀಡಲು ಆರ್ಥಿಕ ಇಲಾಖೆಯನ್ನು ಕೋರಲಾಗುವುದು ಎಂದರು.

ಇತ್ತೀಚಿನ ಸುದ್ದಿ