ಖಾಸಗಿ ಶಿಕ್ಷಕರಿಗೆ ಸಹಾಯ ಹಸ್ತ ನೀಡಿದ ಕನ್ನಡದ ನಟ ಲಿಖಿತ್ ಶೆಟ್ಟಿ - Mahanayaka
8:21 PM Thursday 12 - December 2024

ಖಾಸಗಿ ಶಿಕ್ಷಕರಿಗೆ ಸಹಾಯ ಹಸ್ತ ನೀಡಿದ ಕನ್ನಡದ ನಟ ಲಿಖಿತ್ ಶೆಟ್ಟಿ

likhith shetty
08/06/2021

ಮಂಗಳೂರು:  ಕೋವಿಡ್ ನಿಂದ ಅನೇಕ ಶಾಲಾ ಶಿಕ್ಷಕರಿಗೆ ಸಂಬಳ ಇಲ್ಲದಂತಹ ದಿನಗಳು ನಿರ್ಮಾಣವಾಗಿವೆ. ಕೆಲವರಿಗೆ ಅರ್ಧ ಸಂಬಳ, ಇನ್ನು ಕೆಲವರಿಗೆ ಸಮಯಕ್ಕೆ ಸರಿಯಾಗಿ ಸಂಬಳವೇ ತಲುಪುತ್ತಿಲ್ಲ ತಮ್ಮವರನ್ನು ಕಳೆದುಕೊಂಡಿರುವ ಹಾಗೂ ಕೋವಿಡ್ ನಿಂದ ಅತಿಥಿ ಶಿಕ್ಷಕರಿಗೆ ಪರ್ಮನೆಂಟ್ ಕೆಲಸ ಆಗಲು ಇನ್ನೂ ಕಾಯಬೇಕಾದಂತಹ ಪರಿಸ್ಥಿತಿ..

ಇಂತಹ ಕಠಿಣ ಸಮಯದಲ್ಲಿ ಬೆಂಗಳೂರಿನ ಖಾಸಗಿ ಶಿಕ್ಷಕರ ಸಂಘದವರು ಅನೇಕರಿಗೆ ಮನವಿಯನ್ನು ನೀಡಿ ಸರಿಯಾದ ಸ್ಪಂದನೆ ಸಿಗದಿದ್ದಾಗ ಅದು ಹೇಗೋ ಅವರ ವಿಚಾರಗಳನ್ನು ತಿಳಿದುಕೊಂಡು ಬಹುತೇಕ 33ಕ್ಕೂ ಹೆಚ್ಚು ಶಿಕ್ಷಕರ ಕುಟುಂಬಗಳಿಗೆ ದಿನಸಿ ಸಾಮಗ್ರಿಯ ಕಿಟ್ ಅನ್ನು ಕಾಣಿಕೆಯಾಗಿ ನಟ ಲಿಖಿತ್ ಶೆಟ್ಟಿ  ನೀಡಿದ್ದಾರೆ.

ಶಿಕ್ಷಕರು ಸಮಾಜವನ್ನು ನಿರ್ಮಾಣ ಮಾಡುವವರು ಇಂತಹ ಸಮಯದಲ್ಲಿ ಅವರ ಜೊತೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯ  ಎಂದು ಲಿಖಿತ್ ಶೆಟ್ಟಿ ಸ್ವತಃ  ತಾವೇ ಶಿಕ್ಷಕರ ಸಂಘದ ಮುಖ್ಯಸ್ಥೆ ಆಯೆಷಾ ಶೇಖ್  ಬೆಂಗಳೂರು ಅವರಿಗೆ ಕರೆ ಮಾಡಿ ಕಿಟ್ ಹಸ್ತಾಂತರಿಸಿದ್ದಾರೆ.

ನಟ ನಿರ್ಮಾಪಕ ಹಾಗೂ ಅನೇಕ ಉದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇರುವಂತಹ ಒರಿಯರ್ದೊರಿ ಅಸಲ್(ತುಳು), ನಮ್ ದುನಿಯಾ ನಮ್ ಸ್ಟೈಲ್, ಪೆಟ್ರೋಲ್ ಹಾಗೂ ಸಂಕಷ್ಟಕರ ಗಣಪತಿ , ಫ್ಯಾಮಿಲಿ ಪ್ಯಾಕ್ ಸಿನಿಮಾಗಳ ನಾಯಕನಟ ಲಿಖಿತ್ ಶೆಟ್ಟಿ ಹೆಚ್ಚು ಸದ್ದುಗದ್ದಲವಿಲ್ಲದೆ ತಾವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ.

ಇತ್ತೀಚಿನ ಸುದ್ದಿ