ವೈದ್ಯನ ಖಾಸಗಿ ವಿಡಿಯೋ ತೋರಿಸಿ ಲಕ್ಷ ಗಟ್ಟಲೆ ಲೂಟಿ ಮಾಡಿದ ಯುವತಿ ಹಾಗೂ ತಂಡ ಕೊನೆಗೂ ಪೊಲೀಸ್ ವಶಕ್ಕೆ
ಮೈಸೂರು: ವೈದ್ಯನನ್ನು ಬಲೆಗೆ ಬೀಳಿಸಿದ್ದ ಯುವತಿ ಹಾಗೂ ಗ್ಯಾಂಗ್ 31 ಲಕ್ಷಕ್ಕೂ ಅಧಿಕ ಹಣವನ್ನು ವೈದ್ಯನಿಂದ ವಸೂಲಿ ಮಾಡಿದೆ. ಇದೀಗ ಕೊನೆಗೂ ವೈದ್ಯ ಸೈಲೆಂಟಾಗಿ ಪೊಲೀಸರಿಗೆ ದೂರು ನೀಡಿದ್ದು, ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಡಾ.ಪ್ರಕಾಶ್ ಬಾಬು ಎಂಬವರಿಗೆ ಅನಿತಾ ಎಂಬಾಕೆ ಪರಿಚಯವಾಗಿದ್ದು, ಬಳಿಕ ಈ ಇಬ್ಬರು ಖಾಸಗಿಯಾಗಿ ಕಳೆದಿದ್ದಾರೆ. ಈ ಸಮಯದಲ್ಲಿ ಪೂರ್ವ ನಿಯೋಜಿತವಾಗಿ ಪಿರಿಯಾಪಟ್ಟಣ ತಾಲೂಕು ನಿವಾಸಿಗಳಾದ ನವೀನ್, ಶಿವರಾಜು, ಹರೀಶ್, ವಿಜಿ ಈ ದೃಶ್ಯಗಳನ್ನು ವಿಡಿಯೋ ಮಾಡಿದ್ದು, ಆ ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇವೆ ಎಂದು ವೈದ್ಯನನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
2019 ಡಿಸೆಂಬರ್ನಿಂದ 2020 ಅಕ್ಟೋಬರ್ ತಿಂಗಳವರೆಗೂ ಆರೋಪಿಗಳು ವೈದ್ಯ ಪ್ರಕಾಶ್ ಬಳಿಯಿಂದ 31 ಲಕ್ಷದ 30 ಸಾವಿರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಇಷ್ಟಾದರೂ ವೈದ್ಯನಿಂದ ಹಣ ಕೀಳುವುದನ್ನು ಇವರು ನಿಲ್ಲಿಸಲೇ ಇಲ್ಲ. ಇದರಿಂದಾಗಿ ಪಿರಿಯಾಪಟ್ಟಣ ಬಿಟ್ಟು ಮೈಸೂರು ನಗರಕ್ಕೆ ಬಂದ ಡಾ. ಪ್ರಕಾಶ್ ಬಾಬು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.
ಪೊಲೀಸರು ಆರಂಭದಲ್ಲಿ ಹುಣಸೂರಿನ ಅನಿತಾಳನ್ನು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ನವೀನ್, ಶಿವರಾಜು, ಹರೀಶ್, ವಿಜಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.