ಮತ್ತೋರ್ವ ನೂತನ ಸಚಿವಗೆ ಅತೃಪ್ತಿ: ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಂಟಿಬಿ ನಾಗರಾಜ್
ಬೆಂಗಳೂರು: ನೂತನ ಸಚಿವರನ್ನು ಆಯ್ಕೆ ಮಾಡಿದಾಗ ಕಾಡದ ಸಮಸ್ಯೆ ಖಾತೆ ಹಂಚಿಕೆ ಸಂದರ್ಭದಲ್ಲಿ ಕಾಡಿದ್ದು, ಲಾಭ ದಾಯಕ ಖಾತೆಗಳ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ನಿರಾಸೆಯಾಗಿದ್ದು, ಒಬ್ಬೊಬ್ಬರೇ ಅಸಮಾಧಾನ ತೋರ್ಪಡಿಸಿದ್ದಾರೆ.
ಸಚಿವ ಆನಂದ್ ಸಿಂಗ್ ತಮಗೆ ಹಂಚಲಾಗಿರುವ ಖಾತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಇದೀಗ ಎಂಟಿಬಿ ನಾಗರಾಜ್ ಕೂಡ ತಮ್ಮ ಖಾತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬೊಮ್ಮಾಯಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ ಎಂದು ಎಂಟಿಬಿ ನಾಗರಾಜ್ ಟ್ವೀಟ್ ಮಾಡಿದ್ದು, ತನಗೆ ಪೌರಾಡಳಿತ ಖಾತೆ ತೃಪ್ತಿ ತಂದಿಲ್ಲ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಎಂಟಿಬಿ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಅತೃಪ್ತಿ ಹೊಂದಿದ್ದ ಬಾಂಬೆ ಬಾಯ್ಸ್ ಇದೀಗ ತಮಗೆ ದೊರಕಿದ ಖಾತೆಯಲ್ಲಿ ಕೂಡ ಅತೃಪ್ತಿ ಹೊಂದಿದ್ದಾರೆ. ಇಲ್ಲಿ ಸಲ್ಲದವರಿಗೆ ಎಲ್ಲೂ ಸಲ್ಲುವುದಿಲ್ಲವೇ? ಎನ್ನುವ ಪ್ರಶ್ನೆಗೆ ಕಾರಣವಾಗಿದೆ.
ಇನ್ನಷ್ಟು ಸುದ್ದಿಗಳು…
3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ
ತುಳುನಾಡಿನ ದೈವ ಕೊರಗಜ್ಜನ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು!
ವಿಡಿಯೋ ಕಾಲ್ ನಲ್ಲೇ ಕೊಲೆಗೆ ಟ್ರೈನಿಂಗ್ ನೀಡಿದ ಪ್ರಿಯಕರ: ಅಮ್ಮನನ್ನೇ ಕೊಂದ ಬಾಲಕಿ
ಕೇರಳ-ಪುತ್ತೂರು ಅಧಿಕೃತ ರಸ್ತೆ ಹೊರತು ಪಡಿಸಿ ಉಳಿದ ರಸ್ತೆಗೆ ಮಣ್ಣು ಹಾಕಿ ಮುಚ್ಚಲು ಶಾಸಕರಿಂದ ಸೂಚನೆ