ಖ್ಯಾತ ತಮಿಳು ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ

actor vivek
16/04/2021

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ವಿವೇಕ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ತೀವ್ರ ನಿಗಾ ಘಟಕದಲ್ಲಿ ವಿವೇಕ್ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.

ನಟನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,  ಆಂಜಿಯೋಗ್ರಾಫ್ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.  59 ವರ್ಷದ ನಟ ವಿವೇಕ್ ಗುರುವಾರ ಹಿಂದಿನ ದಿನ ಕೋವಿಡ್-19 ಲಸಿಕೆಯ ಡೋಸ್ ಪಡೆದಿದ್ದರು. ಲಸಿಕೆ ಹಾಕಿದ ಕೂಡಲೇ, ನಟ ಮಾಧ್ಯಮದೊಂದಿಗೆ ಮಾತನಾಡಿ, ಕೊರೋನಾ ಲಸಿಕೆ ಪಡೆಯುವಂತೆ ತಿಳಿಸಿದ್ದರು.

ತಮಿಳು ಚಿತ್ರದಲ್ಲಿ ವಡಿವೇಲು ಬಳಿಕ ನಟ ವಿವೇಕ್ ಮತ್ತೊಬ್ಬ ಅತ್ಯುತ್ತಮ ಹಾಸ್ಯ ನಟನಾಗಿದ್ದರು. ಅತ್ಯುತ್ತಮ ಮಾನವೀಯ ಮೌಲ್ಯವನ್ನೂ ಹೊಂದಿದವರಾಗಿದ್ದಾರೆ. ಇದೇ ವಿವೇಕ್ ಅವರು ಕರ್ನಾಟಕದ ಸಾಲುಮರದ ತಿಮ್ಮಕ್ಕ ಅವರ ಅಭಿಮಾನಿಯೂ ಆಗಿದ್ದು, ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ತಮಿಳುನಾಡಿನ ದೊಡ್ಡ ವೇದಿಯೊಂದರಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದರು.

ಇತ್ತೀಚಿನ ಸುದ್ದಿ

Exit mobile version