ಕಿಯಾ ಕಾರ್ನಿವಲ್ ಲಿಮೋಸಿನ್ ಬಿಡುಗಡೆ: ಇದರ ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ - Mahanayaka
1:02 AM Wednesday 11 - December 2024

ಕಿಯಾ ಕಾರ್ನಿವಲ್ ಲಿಮೋಸಿನ್ ಬಿಡುಗಡೆ: ಇದರ ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ

Kia Carnival Limousine
09/10/2024

ಬೆಂಗಳೂರು: ಕಿಯಾ ಕಂಪನಿಯು ಕಿಯಾ ಕಾನಿವಲ್ ಲಿಮೋಸಿನ್(Kia Carnival Limousine) ಕಾರನ್ನು ಬಿಡುಗಡೆ ಮಾಡಿದೆ. ಈ ಹೊಸ ಕಿಯಾ ಕಾರ್ನಿವಲ್ ನ ಫೀಚರ್ ಗಳು, ಬೆಲೆ ಮೊದಲಾದ ವಿಚಾರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ…

ಕಿಯಾ ಕಾನಿವಲ್ ಲಿಮೋಸಿನ್ ಫೀಚರ್ ಗಳು

2024 ಕಾರ್ನಿವಲ್ ಎಂಪಿವಿಯು 12.3–ಇಂಚಿನ ಇನ್ಫೋಟೈನ್‌ಮೆಂಟ್ ಟಚ್ ಸ್ಕ್ರೀನ್ ಹೊಂದಿದೆ. ಇದು ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿದೆ. ಇದರ ಅವಳಿ ಡಿಸ್ ಪ್ಲೇ ಕಾರಿಗೆ ಅನನ್ಯ ಲುಕ್ ನೀಡುತ್ತದೆ. 12.3–ಇಂಚಿನ ಡಿಜಿಟಲ್ ಡ್ರೈವರ್ ಸೀಟ್ ಇದೆ. ಇದು 12–ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಮತ್ತು 11–ಇಂಚಿನ ಹೆಡ್ಸ್–ಅಪ್ ಡಿಸ್‌ಪ್ಲೇ ಇದೆ. ಪವರ್ ಮತ್ತು ವೆಂಟಿಲೇಟೆಡ್ ಸೀಟುಗಳಿವೆ. ವೈರ್ ಲೆಸ್ ಫೋನ್ ಚಾರ್ಜಿಂಗ್ ಸಾಮರ್ಥ್ಯವನ್ನೂ ಹೊಂದಿವೆ. ಮೂರು ವಲಯದ ಕ್ಲೈಮೆಟ್ ಕಂಟ್ರೊಲ್, ಎಲೆಕ್ಟ್ರಿಕಲ್ ಆಗಿ ಆಪರೇಟ್ ಮಾಡಬಹುದಾದ ಸ್ಲೈಡಿಂಗ್ ಡೋರ್ ಗಳು, ಸುಧಾರಿತ ಸಂಪರ್ಕಿತ ಕಾರ್ ಕಾರ್ಯನಿರ್ವಹಣೆ ಹೊಂದಿದೆ.

ವಿನ್ಯಾಸ ಮತ್ತು ಗಾತ್ರ:

ಕಾರ್ನಿವಲ್ ಹೊಸ ವಿನ್ಯಾಸದೊಂದಿಗೆ ಆಗಮಿಸಿದೆ. ಹಳೆಯ ಕಾರ್ನಿವಲ್ ಗೂ ಹೊಸ ಕಾರ್ನಿವಲ್ ಗೂ ಸಾಕಷ್ಟು ವ್ಯತ್ಯಾಸವಿದೆ. ಆಟೋ ಎಕ್ಸ್‌ಪೋ 2023ನಲ್ಲಿ ಪ್ರದರ್ಶಿಸಲಾದ ಕೆ4 ಆವೃತ್ತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕಂಪನಿ ಎಸ್ ಯುವಿಗಳಿಗೆ ಅನುಗುಣವಾಗಿದೆ. ಕಿಯಾ ಕಾರ್ನಿವಲ್ 5,155 ಮಿ.ಮೀ. ಉದ್ದ, 1,995 ಮಿ.ಮೀ. ಅಗಲ ಮತ್ತು 1,775 ಮಿ.ಮೀ. ಎತ್ತರ ಹೊಂದಿದೆ. 3,090 ಎಂಎಂ ವೀಲ್ ಬೇಸ್ ಹೊಂದಿದೆ.

ಕಿಯಾ ಕಾರ್ನಿವಲ್ ಲಿಮೋಸಿನ್: ಸ್ಪೆಸಿಫಿಕೇಷನ್

2024ರ ಕಿಯಾ ಕಾರ್ನಿವಲ್ ಕಾರು 2.2 ಲೀಟರ್ನ ಡೀಸೆಲ್ ಎಂಜಿನ್ ಹೊಂದಿದೆ.ಇದು 190 ಬಿಎಚ್‌ಪಿ ಮತ್ತು 441 ಎನ್ ಎಂ ಟಾರ್ಕ್ ನೀಡುತ್ತದೆ. ಇದು 8 ಸ್ಪೀಡ್ ನ ಆಟೋಮ್ಯಾಟಿಕ್ ಗಿಯರ್ ಬಾಕಸ್ ಹೊಂದಿದೆ. ಇದು ಫ್ರಂಟ್ ವೀಲ್ ಡ್ರೈವ್ ಕಾನ್ಫಿಗರೇಷನ್ ಹೊಂದಿದೆ. ಇದೇ ಎಂಜಿನ್ ಹಳೆಯ ಮಾಡೆಲ್‌ನಲ್ಲಿತ್ತು. ಭಾರತಕ್ಕೆ ಕಂಪನಿಯು ಡೀಸೆಲ್ ಮಾಡೆಲ್ ಮಾತ್ರ ಪರಿಚಯಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್ ಆವೃತ್ತಿಯೂ ಲಭ್ಯವಿದೆ.

ಕಿಯಾ ಕಾರ್ನಿವಲ್ ಲಿಮೋಸಿನ್ ಕಾರಿನ ಬೆಲೆ ಎಷ್ಟು?

ಭಾರತದಲ್ಲಿ ಕಿಯಾ ಕಾರ್ನಿವಲ್ ಲಿಮೋಸಿನ್ ಕೇವಲ ಒಂದು ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಇದರ ಎಕ್ಸ್ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ. ಭಾರತಕ್ಕೆ ಸಿಕೆಡಿ ಅಥವಾ ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಿಸಿ ಭಾರತಕ್ಕೆ ತರುವ ಕಾರಣ ದರ ಹೆಚ್ಚಾಗಿದೆ. ಭಾರತದಲ್ಲಿಯೇ ಜೋಡಿಸಿದ್ದರೆ ದರ ಕಡಿಮೆಯಾಗುತ್ತಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ