ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದ ಕಿಚ್ಚನ  ವಿರುದ್ಧ ಅಜಯ್ ದೇವಗನ್   ಕಿಡಿ - Mahanayaka

ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದ ಕಿಚ್ಚನ  ವಿರುದ್ಧ ಅಜಯ್ ದೇವಗನ್   ಕಿಡಿ

ajay devgn kiccha sudeep
27/04/2022

ಮುಂಬೈ: ಹಿಂದಿಯನ್ನು ರಾಷ್ಟ್ರ ಭಾಷೆ ಮಾಡಲು ಹಿಂದಿವಾಲರು ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ನಡುವೆ ಕಿಚ್ಚ ಸುದೀಪ್ ಅವರು ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ಹಿಂದಿ ನಟರನ್ನು ಕೆರಳಿಸಿದೆ.

ಇತ್ತೀಚೆಗಷ್ಟೆ, ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಅಭಿಮಾನಿಗಳಿಂದಲೇ ಉಗಿಸಿಕೊಂಡಿದ್ದ ಅಜಯ್ ದೇವಗನ್  ಇದೀಗ ಕಿಚ್ಚ ಸುದೀಪ್  ವಿರುದ್ಧ ಕಿಡಿಕಾರಿದ್ದು,  ಹಿಂದಿ ರಾಷ್ಟ್ರ ಭಾಷೆ ಅಲ್ಲವಾದರೆ, ನಿಮ್ಮ ಸಿನಿಮಾಗಳನ್ನೇಕೆ ಹಿಂದಿಗೆ ಡಬ್ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿ ಮಾತೃ ಭಾಷೆಯಾಗಿದೆ ಮತ್ತು ರಾಷ್ಟ್ರ ಭಾಷೆಯಾಗಿತ್ತು., ರಾಷ್ಟ್ರ ಭಾಷೆಯಾಗಿದೆ. ಮತ್ತು ರಾಷ್ಟ್ರ ಭಾಷೆಯಾಗಿರಲಿದೆ ಎಂದು ಹಿಂದಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಹಿಂದಿ ಹಿಂದಿವಾಲರ ಮಾತೃ ಭಾಷೆ ಎಂದರೆ ಸರಿ, ಆದರೆ ಅಜಯ್ ದೇವಗನ್ ಹಿಂದಿ ಭಾರತೀಯರ ಮಾತೃ ಭಾಷೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ಜ್ಞಾನದ ಮಟ್ಟವನ್ನು ಅಲೆಯುವಂತೆ  ಮಾಡಿದ್ದಾರೆ.

ಕನ್ನಡಿಗರಿಗೆ ಹಿಂದಿ ಮಾತೃ ಭಾಷೆಯಾಗಲು ಹೇಗೆ ಸಾಧ್ಯ? ತಮಿಳರಿಗೆ ಹಿಂದಿ ಭಾಷೆ ಮಾತೃ ಭಾಷೆಯಾಗಲು ಹೇಗೆ ಸಾಧ್ಯ? ಹೀಗೆ ಬೇರೆ ಬೇರೆ ರಾಜ್ಯದವರಿಗೆ ಅವರದ್ದೇ ಮಾತೃ ಭಾಷೆ ಇದೆ. ಆದರೆ ಹಿಂದಿಯನ್ನು ಹೇರುವ ಪ್ರಯತ್ನ ಸಿನಿಮಾ ರಂಗದಲ್ಲೂ ನಡೆಯುತ್ತಿರುವುದು ದುರಂತವಾಗಿದೆ ಎನ್ನುವ ಅಭಿಪ್ರಾಯಗಳು ಇದೀಗ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಅತ್ಯಾಚಾರ :ನಟನ ವಿರುದ್ಧ ಕೇಸ್ 

ನಡು ರಸ್ತೆಯಲ್ಲಿ ಕೈಕೊಟ್ಟ ಇಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಇಟ್ಟ!

ನರ್ಸ್ ನ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು!: ತಾಯಿಯ ಕಣ್ಣಮುಂದೆಯೇ ಘಟನೆ

66ನೇ ವಯಸ್ಸಿನಲ್ಲಿ ಎರಡನೇ ವಿವಾಹಕ್ಕೆ ಸಿದ್ಧವಾದ ಮಾಜಿ ಕ್ರಿಕೆಟಿಗ!

ಒಟಿಟಿ ಗೆ ‘ದಿ ಕಾಶ್ಮೀರ್ ಫೈಲ್ಸ್’:  ZEE 5 ಮೂಲಕ ಬಿಡುಗಡೆ

ಇತ್ತೀಚಿನ ಸುದ್ದಿ