ಸಿಎಂ ಬೊಮ್ಮಾಯಿ ಅವರನ್ನು ಮಾಮಾ ಎಂದು ಕರೆದ ಕಿಚ್ಚ ಸುದೀಪ್!
ಬೆಂಗಳೂರು: ಕಿಚ್ಚ ಸುದೀಪ್ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಕಿಚ್ಚ ಸುದೀಪ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಎಲ್ಲ ವದಂತಿಗಳಿಗೂ ತೆರೆ ಎಳೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕವಯಸ್ಸಿನಿಂದ ಅವರನ್ನು ನೋಡಿಕೊಂಡು ಬಂದಿರೋದ್ರಿಂದ ನಾನು ಅವರನ್ನು ಮಾಮಾ ಎಂದೇ ಕರೆಯೋದು ಅವರನ್ನು ಗೌರವಪೂರ್ವಕವಾಗಿ ಮಾಮಾ ಎಂದು ಕರೆಯುತ್ತೇನೆ. ನಿಲುವು, ರಾಜಕೀಯ ಅಂತ ಇಲ್ಲಿ ಬರೋದಿಲ್ಲ, ಚಿತ್ರರಂಗದ ನನ್ನ ಕಷ್ಟದ ದಿನಗಳಲ್ಲಿ ಕೆಲವೇ ಕೆಲವರು ನನ್ನೊಟ್ಟಿಗೆ ಇದ್ದದ್ದು ಅದರಲ್ಲಿ ಮುಖ್ಯವಾದ ಒಬ್ಬ ವ್ಯಕ್ತಿ ಪ್ರೀತಿಯ ಬಸವರಾಜ್ ಬೊಮ್ಮಾಯಿ ಮಾಮಾ ಎಂದು ಸುದೀಪ್ ಹೇಳಿದರು.
ನನ್ನ ನಿಲುವು ಅಂತ ಏನೂ ಇಲ್ಲ, ನಾನು ನಿಮ್ಮ ಪರ ನಿಂತುಕೊಳ್ತೇನೆ ಅಂತ ಹೇಳಲು ಬಂದಿದ್ದೇನೆ. ಅವರ ಲೀಡರ್ ಶಿಪ್ ನಲ್ಲಿ ನಡೆದ ಕೆಲಸಗಳು ಮತ್ತು ಅವರ ವ್ಯಕ್ತಿತ್ವಕ್ಕೆ ನಾನು ತುಂಬಾ ತಲೆ ಬಾಗುತ್ತೇನೆ. ಆ ವ್ಯಕ್ತಿ ಪರ ನಾನು ನನ್ನ ಸಪೋರ್ಟ್ ಕೊಡೋದಕ್ಕೆ ಇಷ್ಟ ಪಡ್ತೀನಿ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw