ಲಾಯರ್ ಜಗದೀಶ್ ಗೆ ಬೆವರಿಳಿಸಿದ ಕಿಚ್ಚ ಸುದೀಪ್: ಮಂಕಾದ ಲಾಯರ್ ಜಗದೀಶ್
ಬಿಗ್ ಬಾಸ್ ನಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಲ್ಲದೇ, ಹೆಣ್ಣು ಮಕ್ಕಳ ಒಳ ಉಡುಪಿನ ಬಗ್ಗೆ ಮಾತನಾಡಿರುವುದು, ಬಿಗ್ ಬಾಸ್ ಶೋ ವಿರುದ್ಧ ಮಾತನಾಡಿರುವುದು ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ಕಿಚ್ಚ ಸುದೀಪ್ ಅವರ ಕೆಂಗಣ್ಣಿಗೆ ಗುರಿಯಾದರು.
ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತು ಮಾತನಾಡಿದ್ದ ಲಾಯರ್ ಜಗದೀಶ್, ನಾನು ಬಿಗ್ ಬಾಸ್ ಎಕ್ಸ್ ಪೋಸ್ ಮಾಡ್ತಿದ್ದೇನೆ. ನನ್ನನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ನಡೆಸಲು ಆಗುತ್ತಾ ಎಂದು ಸವಾಲ್ ಹಾಕಿದ್ರು. ಈ ಮಾತಿಗೆ ಕಿಚ್ಚ ಸುದೀಪ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ನೀವು ಚಾಲೆಂಜ್ ಮಾಡಿದ್ದು ತಪ್ಪೇ ಅಲ್ಲ, ಅದೊಂದು ಕಾಮಿಡಿ ಎಂದು ಲಾಯರ್ ಜಗದೀಶ್ ಗೆ ಕಿಚ್ಚ ಸುದೀಪ್ ತಿರುಗೇಟು ಕೊಟ್ರು, ಇದಕ್ಕೆ ಬಿಗ್ ಬಾಸ್ ಇತರ ಸ್ಪರ್ಧಿಗಳು ಕೂಡ ಚಪ್ಪಾಳೆ ತಟ್ಟಿದ್ರು. ಬಿಗ್ ಬಾಸ್ ಅನ್ನೋದು ಒಂದು ಅದ್ಬುತವಾದ ಶೋ ಆಗಿದೆ. ಇದನ್ನು ಇಂಪ್ರೂವ್ ಮಾಡೋದು ಈಗ ಇರುವ ನಿಮ್ಮ ಕೈಯಲ್ಲಿದೆ, ಆದ್ರೆ ಹಾಳು ಮಾಡೋದು ನಿಮ್ಮಪ್ಪನ ಆಣೆ ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಸುದೀಪ್ ಖಡಕ್ ವಾರ್ನಿಂಗ್ ನೋಡಿ ಜಗದೀಶ್ ಮಂಕಾಗಿದ್ದಾರೆ.
ನ್ಯಾಯ, ಸಂವಿಧಾನ ಎನ್ನುವ ಜಗದೀಶ್, ಬಿಗ್ ಬಾಸ್ ಮನೆಯಲ್ಲಿ ಮಾಡ್ತಿರೋದು ಏನು? ನರಕದಲ್ಲಿರುವವರಿಗೆ ಸಹಾಯ ಮಾಡಲು ಸ್ವರ್ಗದಲ್ಲಿರುವವರಿಗೆ ಶಿಕ್ಷೆ ಕೊಡ್ತಾರಾ ಎಂದು ಕಿಚ್ಚ ಪ್ರಶ್ನೆ ಮಾಡಿದ್ರು. ಅವರು ನರಕದಲ್ಲಿ ಇದ್ದಾರೆ. ಅದು ಪರಪ್ಪನ ಅಗ್ರಹಾರ ಜೈಲು ಅಲ್ಲ, ಬಿಗ್ ಬಾಸ್ ಮನೆ ಎಂದು ಜಗದೀಶ್ ಗೆ ಸುದೀಪ್ ಗೇಮ್ ಅರ್ಥ ಮಾಡಿಸುವ ಯತ್ನ ಮಾಡಿದರು.
ಲಾಯರ್ ಜಗದೀಶ್ ಹೆಣ್ಮಕ್ಕಳ ಮುಂದೆ ಬಟ್ಟೆ ಬದಲಿಸ್ತಾರೆ ಎಂದು ಹಂಸ ದೂರಿದ್ರು. ಡ್ರೆಸ್ಸಿಂಗ್ ರೂಮ್ನಲ್ಲಿ ಬಟ್ಟೆ ಬದಲಿಸಿ ಅಂದ್ರು ಕೇಳಲ್ಲ. ಹೆಣ್ಮಕ್ಕಳು ಇದ್ದಾರೆ ಅಂತ ಗೊತ್ತಿದ್ರು, ಅರೆ–ಬರೆ ಬಟ್ಟೆಯಲ್ಲಿ ಓಡಾಡ್ತಾರೆ ಎಂದು ಹಂಸ ಹೇಳಿದ್ರು. ಇದಕ್ಕೆ ಪಕ್ಕದಲ್ಲಿ ದೊಡ್ಮನೆ ಮಹಿಳೆಯರು ಕೂಡ ತಲೆಯಾಡಿಸಿದ್ರು. ಕ್ಯಾಪ್ಟನ್ ಆಗಿರುವ ನೀವು ಅವರನ್ನು ಸರಿ ಮಾಡಿ ಎಂದು ಸುದೀಪ್ ಹೇಳಿದ್ರು.
ಉಗ್ರಂ ಮಂಜು ಜೊತೆ ಜಗಳಕ್ಕೆ ಇಳಿದ ಲಾಯರ್ ಜಗದೀಶ್ ರೊಚ್ಚಿಗೆದ್ದು, ರೋಷವೇಶದ ಮಾತುಗಳನ್ನು ಆಡಿದ್ರು. ಇದೇ ವೇಳೆ ಹೆಣ್ಮಕ್ಕಳ ಒಳ ಉಡುಪಿನ ಬಗ್ಗೆ ಅಸಭ್ಯ ಕಮೆಂಟ್ ಮಾಡಿದ್ದರು. ಈ ವಿಚಾರಕ್ಕೂ ಸುದೀಪ್ ಜಗದೀಶ್ ಅವರನ್ನು ತರಾಟೆಗೆ ತೆಗೆದುಕೊಂಡ್ರು. ಅಷ್ಟೇ ಅಲ್ಲದೇ ಮನೆಯವರನ್ನು ಎಳೆದು ತರಬೇಡಿ ಎಂದು ಕಿವಿ ಮಾತು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: