ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಕಿಡಂಬಿ ಶ್ರೀಕಾಂತ್ ಗೆ ಬೆಳ್ಳಿ ಪದಕ
ನವದೆಹಲಿ: ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸಿಂಗಾಪುರದ ಲೋಹ್ ಕೀನ್‌ಯೂ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತು ಭಾರತದ ಕಿಡಂಬಿ ಶ್ರೀಕಾಂತ್ ಅವರು ಬೆಳ್ಳಿ ಪದಕ ಗಳಿಸಿದ್ದಾರೆ.
ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ ಭಾರತದ ಏಕೈಕ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೀಕಾಂತ್ ಪಾತ್ರರಾಗಿದ್ದಾರೆ. ಶ್ರೀಕಾಂತ್ 15-21, 20-22 ರಿಂದ 43 ನಿಮಿಷಗಳವರೆಗೆ ನಡೆದ ಪಂದ್ಯವನ್ನು ಕಳೆದುಕೊಂಡಿದ್ದಾರೆ. ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಶ್ರೀಕಾಂತ್ ಮೊದಲ ಗೇಮ್‌ನಲ್ಲಿ 9-3 ರಿಂದ ಮುನ್ನಡೆಯಲ್ಲಿದ್ದರು. ಆದರೆ ಸಿಂಗಾಪುರದ ಅವರ ಎದುರಾಳಿಯು ಉತ್ತಮ ಕಮ್ ಬ್ಯಾಕ್ ಮಾಡಿದ್ದಾರೆ. ಶ್ರೀಕಾಂತ್ ಈ ಸೆಟ್‌ನ್ನು ಕೇವಲ 16 ನಿಮಿಷಗಳಲ್ಲಿ ಕಳೆದುಕೊಂಡರು.
ಎರಡನೇ ಗೇಮ್ ನಲ್ಲಿ ಶ್ರೀಕಾಂತ್ ಉತ್ತಮ ಹೋರಾಟ ನೀಡಿದರಾದರೂ ಲೋಹ್ ಕೀನ್‌ಯೂ ಪ್ರಬಲ ಪ್ರದರ್ಶನ ನೀಡಿ ವಿಜೇತರಾಗಿದ್ದಾರೆ. ಶ್ರೀಕಾಂತ್ ಶನಿವಾರದಂದು ತಮ್ಮದೇ ದೇಶದ ಲಕ್ಷ್ಯ ಸೇನ್ ವಿರುದ್ಧ ಜಯಗಳಿಸಿ ಚಾಂಪಿಯನ್ ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು ನಿರ್ಮಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬೈಕ್ ಗೆ ಲಾರಿ ಡಿಕ್ಕಿ: ಇಬ್ಬರು ಮಕ್ಕಳು ಸಹಿತ ತಾಯಿ ದಾರುಣ ಸಾವು
ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಚಿಂತನೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಪ್ರೇಮ ವೈಫಲ್ಯ: ಬೀದರ್ ಮೂಲದ ವಿದ್ಯಾರ್ಥಿನಿ ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು
ಭಾರತ 400 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಸಾಧಿಸಲಿದೆ: ಕೇಂದ್ರ ಸಚಿವ ಪಿಯೂಷ್ ಗೋಯಲ್
ಪಶ್ಚಿಮ ಬಂಗಾಳ: ಬೆಳೆ ನಾಶ ಬೇಸತ್ತು ಮೂವರು ರೈತರ ಆತ್ಮಹತ್ಯೆ
ವಂಚನೆ: ಮಾಜಿ ಒಲಿಂಪಿಯನ್ ಪಿಟಿ ಉಷಾ ವಿರುದ್ಧ ದೂರು ದಾಖಲು
ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪ್ರತಾಪ ತೋರಿಸುವುದು ಬೇಡ: ಕುಮಾರಸ್ವಾಮಿ