ಕಿಮ್ ಜೊಂಗ್ ಉನ್ ಗೆ ರಹಸ್ಯವಾಗಿ ಕೊವಿಡ್ ಔಷಧಿ ನೀಡಿದ ಚೀನಾ | ಗುಪ್ತಚರ ಮಾಹಿತಿಯಿಂದ ಚೀನಾದ ಕಳ್ಳಾಟ ಬಯಲು - Mahanayaka
6:04 PM Wednesday 30 - October 2024

ಕಿಮ್ ಜೊಂಗ್ ಉನ್ ಗೆ ರಹಸ್ಯವಾಗಿ ಕೊವಿಡ್ ಔಷಧಿ ನೀಡಿದ ಚೀನಾ | ಗುಪ್ತಚರ ಮಾಹಿತಿಯಿಂದ ಚೀನಾದ ಕಳ್ಳಾಟ ಬಯಲು

01/12/2020

ಉತ್ತರಕೊರಿಯಾ: ಚೀನಾವು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಮತ್ತು ಅವರ ಕುಟುಂಬಕ್ಕೆ ಪ್ರಾಯೋಗಿಕ ಕೊರೊನಾ ವೈರಲ್ ಲಸಿಕೆ ನೀಡಿದೆ ಎಂದು ಹೇಳಲಾಗಿದ್ದು, ಯು ಎಸ್ ನ ವಿಶ್ಲೇಷಕರೊಬ್ಬರು ಮಂಗಳವಾರ, ಜಪಾನ್ ನ ಎರಡು ಗುಪ್ತಚರ ಮೂಲಗಳಿಂದ ಮಾಹಿತಿಗಳನ್ನು ಆಧರಿಸಿ ಈ ಮಾಹಿತಿ ನೀಡಿದೆ.

ಕಿಮ್ಸ್ ಹಾಗೂ ಅವರ ಕುಟುಂಬ ಹಾಗೂ ಹಲವು ಹಿರಿಯ ಅಧಿಕಾರಿಗಳಿಗೆ ಚೀನಾವು ಔಷಧಿ ವಿತರಿಸಿದೆ ಎಂದು ಹೇಳಲಾಗಿದೆ. ಆದರೆ ಈ ಔಷಧಿಯು ಕೊವಿಡ್ ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆಯೇ? ಎಂಬ ಬಗ್ಗೆ ಇನ್ನೂ ಸಮರ್ಪಕವಾದ ಮಾಹಿತಿಗಳು ಲಭ್ಯವಾಗಿಲ್ಲ.


ಕಳೆದ ಮೂರು ವಾರಗಳಲ್ಲಿ ಚೀನಾ ಸರ್ಕಾರವು ಕಿಮ್ ಜೊಂಗ್ ಉನ್ ಮತ್ತು ಕಿಮ್ ಕುಟುಂಬ ಹಾಗೂ ಅವರ ನಿಕಟ ಸಂಪರ್ಕದಲ್ಲಿರುವ ಹಿರಿಯ ಅಧಿಕಾರಿಗಳಿಗೆ  ಚೀನಾವು ಕೊವಿಡ್ ಔಷಧಿಗಳನ್ನು ಸರಬರಾಜು ಮಾಡಿದೆ ಎಂದು ಕಾಜಿಯಾನಿಸ್ ಆನ್ ಲೈನ್ ಮಾಧ್ಯಮದಲ್ಲಿ ಲೇಖನ ಬರೆಯಲಾಗಿದೆ. ಇದರಿಂದಾಗಿ ಈ ವಿಚಾರ ಹೊರ ಬಂದಿದೆ ಎಂದು ಹೇಳಲಾಗಿದೆ.  ಆದರೆ ಇದು ಪ್ರಾಯೋಗಿಕ ಲಸಿಕೆಯೇ? ಎಂಬ ಬಗ್ಗೆ ಅನುಮಾನಗಳಿವೆ.

ಚೀನಾದಲ್ಲಿ ಒಂದು ಮಿಲಿಯನ್ ಜನರ ಮೇಲೆ ಕೊವಿಡ್ ಔಷಧಿಯನ್ನು ಬಳಸಲಾಗಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ. ಚೀನಾದ ಜೊತೆಗೆ ಮಾತ್ರವೇ ವ್ಯಾಪಾರ ಸಂಬಂಧವನ್ನಿಟ್ಟುಕೊಂಡಿರುವ ಉತ್ತರ ಕೊರಿಯಾಕ್ಕೆ ಚೀನಾ ಕೊವಿಡ್ ಔಷಧಿಯನ್ನು ನೀಡಿದೆ ಎಂದು ಹೇಳಲಾಗಿದೆ. ಚೀನಾವು ಈ ಹಿಂದೆಯೇ ಕೊವಿಡ್ ಔಷಧಿಯನ್ನು ಕಂಡು ಹಿಡಿದಿದ್ದು, ಹೀಗಾಗಿಯೇ ಇಷ್ಟೊಂದು ವೇಗವಾಗಿ ಕೊವಿಡ್ ಮುಕ್ತವಾಗಿದೆ ಎನ್ನುವ ಅನುಮಾನಗಳು ಈ ಹಿಂದಿನಿಂದಲೂ ಇತ್ತು. ಇಡೀ ವಿಶ್ವಕ್ಕೆ ಕೊರೊನಾ ಹಂಚಿದ ಚೀನಾವು ಇದೀಗ ತಾನು ಕೊವಿಡ್ ನಿಂದ ಮುಕ್ತವಾಗಿ ಇಡೀ ವಿಶ್ವವನ್ನೇ ಕೊವಿಡ್ ಮಯಗೊಳಿಸಿದೆ. ಇದೀಗ ಔಷಧಿಯನ್ನೂ ಮರೆಮಾಚಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ