ಸರ್ಕಾರಿ ಕೆಲಸ ಅಂತ ಹೇಳಿ ಮದುವೆಯಾಗಿದ್ದ ಪ್ರತಿಮಾ ಕೊಲೆ ಆರೋಪಿ ಕಿರಣ್!
ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಅವರ ಹತ್ಯೆ ನಡೆಸಿದ ಕಾರು ಚಾಲಕ ಕಿರಣ್ ಬಗ್ಗೆ ಇನ್ನಷ್ಟು ವಿವರಗಳು ಲಭ್ಯವಾಗಿದೆ. ಇಂದು ಪೊಲೀಸರ ಬಲೆಗೆ ಬಿದ್ದ ಕಿರಣ್, ಹತ್ಯೆಗೆ ಕಾರಣ ಏನು ಅನ್ನೋದನ್ನು ಬಹಿರಂಗಪಡಿಸಿದ್ದಾನೆ.
ಕಿರಣ್ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ತಾನು ಸರ್ಕಾರಿ ಕೆಲಸದಲ್ಲಿದ್ದೇನೆ ಎಂದು ಸಂಬಂಧಿಕರನ್ನು ನಂಬಿಸಿದ್ದ. ಸರ್ಕಾರಿ ಕೆಲಸದಲ್ಲಿರೋದಾಗಿ ಹೇಳಿ ಮದುವೆ ಕೂಡ ಆಗಿದ್ದ. ಆದರೆ ಹದಿನೈದು ದಿನಗಳ ಹಿಂದೆ ಪ್ರತಿಮಾ ಅವರು ಕಿರಣ್ ನನ್ನು ಕೆಲಸದಿಂದ ತೆಗೆದಿರೋದು ತಿಳಿಯುತ್ತಿದ್ದಂತೆಯೇ ಪತ್ನಿ ಮುನಿಸಿಕೊಂಡು ತವರಿಗೆ ಹೋಗಿದ್ದಳು ಎನ್ನಲಾಗಿದೆ.
ಕೈಬಿಟ್ಟು ಹೋದ ಕೆಲಸವನ್ನು ಹೇಗಾದರೂ ಪಡೆದುಕೊಳ್ಳಬೇಕು ಅಂತ ಶನಿವಾರ ತೀರ್ಮಾನ ಮಾಡಿದ್ದ ಕಿರಣ್ ಶನಿವಾರ ರಾತ್ರಿ ಪ್ರತಿಮಾ ಅವರ ಮನೆಗೆ ಹೋಗಿದ್ದಾನೆ. ನನ್ನನ್ನು ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾನೆ.
ಆದರೆ, ಕೆಲಸಕ್ಕೆ ಮತ್ತೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಮಾ ಹೇಳಿದ್ದು, ಇದರಿಂದ ಕೋಪಗೊಂಡು ಪ್ರತಿಮಾ ಮನೆಯಲ್ಲೇ ಇದ್ದ ಚಾಕುವನ್ನು ತೆಗೆದುಕೊಂಡು ಕತ್ತುಕೊಯ್ದು ಹತ್ಯೆ ಮಾಡಿದ್ದಾನೆ. ಪ್ರತಿಮಾ ಅವರ ಪರ್ಸ್ ನಲ್ಲಿದ್ದ 15 ಸಾವಿರ ರೂಪಾಯಿಯನ್ನು ತೆಗೆದುಕೊಂಡು ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw