ವಿಸ್ಮಯ ಪ್ರಕರಣ: ಕಿರಣ್ ಕುಮಾರ್ ಗೆ 10 ವರ್ಷ ಜೈಲು | 12 ಲಕ್ಷ ದಂಡ - Mahanayaka
6:09 AM Thursday 12 - December 2024

ವಿಸ್ಮಯ ಪ್ರಕರಣ: ಕಿರಣ್ ಕುಮಾರ್ ಗೆ 10 ವರ್ಷ ಜೈಲು | 12 ಲಕ್ಷ ದಂಡ

vismaya
24/05/2022

ಕೊಲ್ಲಂ: ವರದಕ್ಷಿಣೆ ಕಿರುಕುಳ,  ವಿಸ್ಮಯಾ  ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪತಿ ಕಿರಣ್ ಕುಮಾರ್ ಗೆ 10 ವರ್ಷ ಜೈಲು ಮತ್ತು  12ವರೆ ಲಕ್ಷ ರೂ. ದಂಡವನ್ನು  ಕೊಲ್ಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಇದರಲ್ಲಿ 2 ಲಕ್ಷ ರೂ.ವಿಸ್ಮಯಾ ಮನೆಯವರಿಗೆ ನೀಡಬೇಕಾಗಿದೆ. 304 ಬಿ – ವರದಕ್ಷಿಣೆ ಚಿತ್ರಹಿಂಸೆಯಿಂದ ಸಾವು, ಸೆಕ್ಷನ್ 306 ಆತ್ಮಹತ್ಯೆ ಪ್ರೇರಣೆ ಮತ್ತು 498 ಎ ವರದಕ್ಷಿಣೆ ಆರೋಪದಡಿ ಶಿಕ್ಷೆ ವಿಧಿಸಲಾಗಿದೆ

ವಿಸ್ಮಯಾ ಮತ್ತು ಕಿರಣ್ ಮೇ 31, 2019 ರಂದು ವಿವಾಹವಾಗಿದ್ದರು. ಮುಂದಿನ ವರ್ಷ, ಜೂನ್ 21, 2021 ರಂದು, ವಿಸ್ಮಯಾ ತನ್ನ ಪತಿಯ ಕಿರುಕುಳವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಳು.  ಜೂನ್ 22, 2021 ರಂದು ಕುಟುಂಬವು ವಿಸ್ಮಯಾ ಅವರದು ಕೊಲೆ ಎಂದು ಆರೋಪಿಸಿ  ಪ್ರಕರಣ ದಾಖಲು ಮಾಡಲಾಗಿತ್ತು.

ಜೂನ್ 22 ರಂದು ಆಕೆಯ ಪತಿ ಕಿರಣ್ ಕುಮಾರ್ ನನ್ನು ಬಂಧಿಸಲಾಗಿತ್ತು.  ಅದೇ ದಿನ ಕಿರಣ್ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು.  ಜೂನ್ 25 ರಂದು ಪೊಲೀಸರು ವಿಸ್ಮಯಾ ಅವರನ್ನು ನೇಣಿಗೇರಿಸಲಾಗಿದೆ ಎಂದು ವರದಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಜನವರಿ 10, 2022 ರಂದು ಪ್ರಾರಂಭವಾಯಿತು.  ಮೇ 23, 2022 ರಂದು, ವಿಸ್ಮಯಾ  ಮರಣದ ಹನ್ನೊಂದು ತಿಂಗಳು ಮತ್ತು ಎರಡು ದಿನಗಳ ನಂತರ, ಕಿರಣ್ ತಪ್ಪಿತಸ್ಥರೆಂದು ಸಾಬೀತಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶೂಟಿಂಗ್ ವೇಳೆ ನದಿಗೆ ಬಿದ್ದ ಕಾರು: ನಟಿ ಸಮಂತಾ, ವಿಜಯದೇವರಕೊಂಡ ಇದ್ದ ಕಾರು

ಜೂನ್ 1 ರಿಂದ ಶಾಲಾ ಮಕ್ಕಳಿಗೆ  ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಣೆ

ಬ್ರಿಟಿಷರು ಟಿಪ್ಪುವಿನ ಬಗ್ಗೆ ಬರೆದ ಪುಸ್ತಕಗಳನ್ನು ತೆಗೆದು ಬಿಜೆಪಿಯವರು ಓದಲಿ: ಕಾಂಗ್ರೆಸ್

ಮತ್ತೊಂದು ಭೀಕರ ಸರಣಿ ಅಪಘಾತ: 8 ಮಂದಿಯ ದಾರುಣ ಸಾವು

ಇತ್ತೀಚಿನ ಸುದ್ದಿ