ಕಿರಣಿ ಅಂಗಡಿಗೆ ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ಕಿರಣಿ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣದ ಸಂಬಂಧ ಒಂದೇ ಹೆಸರಿನ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕುಮಾರಸ್ವಾಮಿ ಲೇಔಟ್ನ ವಸಂತಪುರದಲ್ಲಿ ನಡೆದಿದೆ.
ಆರೋಪಿಗಳು ಡಿ. 16ರ ಮಧ್ಯರಾತ್ರಿ ಬಾರ್ಗೆ ಬೆಂಕಿ ಹಚ್ಚುವ ಬದಲು ಕಿರಾಣಿ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಅಪಾಚಿ ಬೈಕ್ನಲ್ಲಿ ಬಂದು ಕೃತ್ಯ ಎಸಗಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆರೋಪಿಗಳು ವಸಂತಪುರದಲ್ಲಿರುವ ಕಿರಣಿ ಅಂಗಡಿ ಪಕ್ಕದ ಬಾರ್ನಲ್ಲಿ ಕುಡಿದು ಗಲಾಟೆ ಮಾಡಿದ್ದರು. ಈ ವೇಳೆ ಬಾರ್ ಸಿಬ್ಬಂದಿ ಗಲಾಟೆ ಮಾಡಿದವರಿಗೆ ಹೊಡೆದು, 1,500 ರೂ. ದಂಡ ಕಟ್ಟಿಸಿಕೊಂಡಿದ್ದರು.
ಎಲ್ಲರೆದುರು ಮಾನ ಹೋಯ್ತು ಅಂತ ಕುಪಿತಗೊಂಡಿದ್ದ ಆರೋಪಿಗಳು, ಬಾರ್ಗೆ ಬೆಂಕಿ ಹಚ್ಚಿ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದರು. ಅದರಂತೆ ಡಿ. 16ರ ಮಧ್ಯರಾತ್ರಿ ಬಾರ್ ಬಳಿ ಬಂದ ಕಿಡಿಗೇಡಿಗಳು, ಬಾರ್ಗೆ ಬೆಂಕಿ ಹಚ್ಚುವ ಬದಲು ಕಿರಾಣಿ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಈ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯೂಟ್ಯೂಬ್ ನೋಡಿಕೊಂಡು ಪತ್ನಿಗೆ ಡೆಲಿವರಿ ಮಾಡಲು ಯತ್ನಿಸಿದ ಪತಿ: ಮಗು ಸಾವು, ಮಹಿಳೆಯ ಸ್ಥಿತಿ ಚಿಂತಾಜನಕ
ಕನ್ನಡ ಬಾವುಟ ಸುಟ್ಟು, ಬಸವಣ್ಣನ ಚಿತ್ರ ಅಪವಿತ್ರಗೊಳಿಸಿದ ಮೂವರು ಆರೋಪಿಗಳ ಬಂಧನ
ಮೊದಲ ಬಲಿ ಪಡೆದುಕೊಂಡ ಒಮಿಕ್ರಾನ್: 50 ವರ್ಷದ ವ್ಯಕ್ತಿ ಸಾವು
ರಶ್ಮಿಕಾ ಮಂದಣ್ಣ ಜೊತೆಗೆ ತೆರೆ ಹಂಚಿಕೊಳ್ಳುತ್ತಾರಾ ಡಾಲಿ ಧನಂಜಯ್?
ಕನ್ನಡ ಬಾವುಟ ಸುಟ್ಟದ್ದು, ಕನ್ನಡ ತಾಯಿಯನ್ನೇ ಸುಟ್ಟಂತೆ | ನಟ ಶಿವರಾಜ್ ಕುಮಾರ್