ಕಿಟಕಿಯಲ್ಲಿ ನೇತಾಡುತ್ತಾ ಲಸಿಕೆ ಪಡೆದ ವ್ಯಕ್ತಿ | “ಶಾರ್ಟ್ ಕಟ್ ಲಸಿಕೆ” ವಿಡಿಯೋ ವೈರಲ್ - Mahanayaka

ಕಿಟಕಿಯಲ್ಲಿ ನೇತಾಡುತ್ತಾ ಲಸಿಕೆ ಪಡೆದ ವ್ಯಕ್ತಿ | “ಶಾರ್ಟ್ ಕಟ್ ಲಸಿಕೆ” ವಿಡಿಯೋ ವೈರಲ್

17/08/2021

ದೇಶದಲ್ಲಿ ಲಸಿಕೆ ಪಡೆಯಲು ಕ್ಯೂ ನಿಂತು ಸಾಕಾಗಿ, ಕೊರೊನಾಕ್ಕೆ ನಾನಾ ರೀತಿಯ ಶಾಪಗಳನ್ನು ಹಾಕುತ್ತಾ ಮನೆಗೆ ಬಂದವರಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಸರತಿ ಸಾಲನ್ನು ಬಿಟ್ಟು ಶಾರ್ಟ್ ಕಟ್ ನಲ್ಲಿ ಹೋಗಿ ಲಸಿಕೆ ಹಾಕಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅರುಣ್ ತ್ಯಾಗಿ ಎಂಬವರು ಹಂಚಿಕೊಂಡಿರುವ 15 ಸೆಕೆಂಡುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು,  ಟ್ರೋಲ್ ಪೇಜ್ ಗಳ ಬಾಯಿಗೆ ಆಹಾರವಾಗಿದೆ. ಎಲ್ಲರೂ ಕೊವಿಡ್ ಲಸಿಕೆಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಕಟ್ಟಡದ ಹಿಂದೆ ಹೋಗಿ ವೈದ್ಯರ ಕೋಣೆಯ ಕಿಟಕಿ ಬಡಿದು ಲಸಿಕೆ ಹಾಕಲು ಮನವಿ ಮಾಡಿದ್ದಾನೆ.

ವಿಡಿಯೋದಲ್ಲಿ ಕಂಡು ಬಂದಂತೆ ಮಧ್ಯ ವಯಸ್ಕನೋರ್ವ ಕಟ್ಟಡದ ಹಿಂಬದಿಯ ಕಂಪೌಂಡ್ ನಲ್ಲಿ ನೇತಾಡುತ್ತ,  ವೈದ್ಯರಿಂದ ಲಸಿಕೆ ಹಾಕಿಸಿಕೊಳ್ಳುತ್ತಾನೆ. ಅದೇ ಕಟ್ಟಡದ ಮುಂಭಾಗದಲ್ಲಿ ಉದ್ದವಾದ ಸಾಲಿನಲ್ಲಿ ಜನರು ಲಸಿಕೆಗಾಗಿ ಕಾಯುತ್ತಿರುವುದು ಕಂಡು ಬಂದಿದೆ.

ಇನ್ನಷ್ಟು ಸುದ್ದಿಗಳು…

ತಮಿಳುನಾಡಿನಂತೆ ಕರ್ನಾಟಕದಲ್ಲಿಯೂ ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಾ? | ಸಿಎಂ ಬೊಮ್ಮಾಯಿ ಹೇಳಿದ್ದೇನು?

ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದ ತೆಂಗಿನ ಮರ | ಕ್ಷಣ ಮಾತ್ರದಲ್ಲೇ ಮರದಲ್ಲಿದ್ದ ಎಳೆನೀರು ಖಾಲಿ!

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ | ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆ

ಕಾಬುಲ್ ನ ಅಮ್ಯೂಸ್ಮೆಂಟ್ ಪಾರ್ಕ್ ಗೆ ನುಗ್ಗಿ ಮಕ್ಕಳ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು

ತಾಲಿಬಾನ್ ಉಗ್ರರ ಕೈಸೇರಿತು ಅಮೆರಿಕದ ಆಧುನಿಕ ಯುದ್ಧೋಪಕರಣಗಳು | ವಿಶ್ವಕ್ಕೆ ಸವಾಲು ಹಾಕುತ್ತಾರಾ ಉಗ್ರರು?

ಕಮಿಷನರ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾದ ದಂಪತಿ: ಕೊನೆಯ ಸಂದೇಶದಲ್ಲಿತ್ತು ಮನಕಲಕುವ ನೋವು

4 ಕಾರು, 1 ಹೆಲಿಕಾಫ್ಟರ್ ನಲ್ಲಿ ಹಣ ತುಂಬಿಸಿಕೊಂಡು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪರಾರಿ

ಇತ್ತೀಚಿನ ಸುದ್ದಿ