ಹಾಲಿನ ಬೆಲೆ ಏರಿಕೆ ಆದೇಶ ಮಾಡಿ ಹಿಂಪಡೆದಿದ್ದೇಕೆ?
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಸರ್ಕಾರಿ ಆದೇಶಗಳಿಗೆ ಗ್ಯಾರೆಂಟಿ ಇಲ್ಲ ಅನ್ನೋವಂತಹ ಸ್ಥಿತಿ ನಿರ್ಮಾಣವಾಗಿದೆ ಅನ್ನೋ ಮಾತುಗಳು ಆಗಾಗ ಕೇಳಿ ಬರುತ್ತಿದೆ. ರಾತ್ರಿ ಆದೇಶ ಮಾಡಿದರೆ, ಬೆಳಗ್ಗಿನ ವೇಳೆಗೆ ಆದೇಶ ಹಿಂಪಡೆಯುವ ಹಲವು ಘಟನೆಗಳು ಇತ್ತೀಚೆಗೆ ನಡೆದಿವೆ. ಈ ಸಾಲಿಗೆ ಹಾಲಿನ ಬೆಲೆ ಏರಿಕೆ ಆದೇಶವೂ ಸೇರಿದೆ.
ನಿನ್ನೆ ನಂದಿನಿ ಹಾಲಿನ ದರವನ್ನು ಏಕಾಏಕಿ 3 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಹೇಳಿತ್ತು. ಈ ವರದಿ ಪ್ರಸಾರವಾಗಿ ಕೆಲವೇ ಕ್ಷಣಗಳಲ್ಲಿ ಹಾಲಿನ ಬೆಲೆ ಏರಿಕೆ ಸದ್ಯಕ್ಕಿಲ್ಲ ಎಂಬ ಹೇಳಿಕೆಯನ್ನು ಸಿಎಂ ಬೊಮ್ಮಾಯಿ ನೀಡಿದ್ದರು.
ಇದೇ 20ರಂದು ಬೆಲೆ ಏರಿಕೆ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಹಾಲಿನ ಬೆಲೆ ಏರಿಕೆಗೆ ಸರ್ಕಾರಿ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಚುನಾವಣೆ ಬಹಳ ಸಮೀಪದಲ್ಲೇ ಇರುವುದರಿಂದ ಈಗ ಬೆಲೆ ಏರಿಕೆ ಮಾಡಿದ್ರೆ, ಜನರ ಆಕ್ರೋಶಕ್ಕೆ ತುತ್ತಾಗ ಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಹಿಂದೇಟು ಹಾಕಲಾಗಿದೆ ಎನ್ನಲಾಗಿದೆ.
ಚುನಾವಣೆಯವರೆಗೆ ಜನರು ಸೇಫ್, ಚುನಾವಣೆಯ ಬಳಿಕ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದೇ ಬಾರಿಗೆ ಹಾಲಿನ ದರವನ್ನು 3 ರೂಪಾಯಿಗೆ ಏರಿಕೆ ಮಾಡುವುದು ಎಷ್ಟು ಸರಿ? ಈಗಾಗಲೇ ಜನರು ಬೆಲೆ ಏರಿಕೆಯಿಂದ ರೋಸಿ ಹೋಗಿದ್ದಾರೆ. ಈ ನಡುವೆ ಹಾಲಿನ ಬೆಲೆ ಏರಿಕೆಯ ಕತ್ತಿ ಜನರ ತಲೆಯ ಮೇಲೆ ತೂಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka