ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಕೋಲಾರದ ಯುವತಿ ಅಶ್ವಿನಿ ನೇಮಕ
ಕೋಲಾರ: ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ (ಯುಎನ್ ಎಚ್ ಆರ್ ಸಿ) ಸ್ವತಂತ್ರ ತಜ್ಞೆಯಾಗಿ ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ದಲಿತ ಯುವತಿ ಡಾ.ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ.
ಜಿನೀವಾದಲ್ಲಿ ಇದೇ 7ರಂದು ಮುಕ್ತಾಯವಾದ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಅಧಿವೇಶನದಲ್ಲಿ ಅಶ್ವಿನಿ ಅವರ ನೇಮಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಈ ಹುದ್ದೆಗೆ ಅಶ್ವಿನಿ ಸೇರಿದಂತೆ ಮೂವರ ಹೆಸರು ಕೇಳಿ ಬಂದಿದ್ದವು. ಜಿನೆವಾದಲ್ಲಿ ನವೆಂಬರ್ 1ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಅವರ ಅಧಿಕಾರ ಅವಧಿ ಆರು ವರ್ಷ. ಈ ಹುದ್ದೆಗೆ ನೇಮಕವಾದ ಏಷ್ಯಾ ಮತ್ತು ಭಾರತದ ಮೊದಲ ವ್ಯಕ್ತಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿಯ ವರ್ಣಭೇದ ನೀತಿ, ಜನಾಂಗೀಯ ತಾರತಮ್ಯ, ಕ್ಸೆನೋಫೋಬಿಯಾ, ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳನ್ನು ಇವರು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ. ಈ ಬಗ್ಗೆ ಮಂಡಳಿಗೆ ಕಾಲಕಾಲಕ್ಕೆ ವರದಿ ಹಾಗೂ ಸಲಹೆ ನೀಡಲಿದ್ದಾರೆ.
ಡಾ.ಕೆ.ಪಿ.ಅಶ್ವಿನಿ ಅವರು ಕುರುಬರಹಳ್ಳಿ ಗ್ರಾಮದ ವಿ.ಪ್ರಸನ್ನಕುಮಾರ್ ಹಾಗೂ ಜಯಮ್ಮ ದಂಪತಿಯ ಪುತ್ರಿಯಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka