ಸೀರಿಯಸ್ ಆಗಿ ಇದನ್ನು ಹ್ಯಾಂಡೆಲ್ ಮಾಡ್ತೀವಿ: ಕೋಲಾರದಲ್ಲಿ ಜಾತಿವಾದಿಗಳಿಗೆ ಎನ್.ಮಹೇಶ್ ಖಡಕ್ ಸಂದೇಶ
ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ದೇವರ ಮೂರ್ತಿ ಮುಟ್ಟಿದ ಎಂದು ಆರೋಪಿಸಿ ಸವರ್ಣಿಯರು ದಲಿತ ಬಾಲಕನ ಮೇಲೆ ದೌರ್ಜನ್ಯ ನಡೆಸಿ, 60 ಸಾವಿರ ದಂಡ ವಿಧಿಸಿದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಮಂಡಲದ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬಿತು.
ಈ ವೇಳೆ ಮಾಜಿ ಸಚಿವ, ಕೊಳ್ಳೇಗಾಲ ಎನ್.ಮಹೇಶ್ ಮಾತನಾಡಿ, ಸವರ್ಣೀಯ ಸಮಾಜದಲ್ಲಿ ಜಾಗೃತಿ ಉಂಟಾಗಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದಾರೆ. ಅಸ್ಪೃಶ್ಯತೆ ಸಮಸ್ಯೆ ಅಸ್ವೃಶ್ಯರ ಸಮಸ್ಯೆಯಲ್ಲ ಸವರ್ಣೀಯ ಹಿಂದೂಗಳ ಸಮಸ್ಯೆ ಅಂತ. ಸವರ್ಣೀಯ ಹಿಂದೂಗಳ ಮನಪರಿವರ್ತನೆಯಾಗದಿದ್ದರೆ, ಈ ಸಮಸ್ಯೆ ಹೀಗೆ ಮುಂದುವರಿಯುತ್ತದೆ ಎಂದರು.
ನೊಂದ ಕುಟುಂಬಕ್ಕೆ ಧೈರ್ಯ ಹೇಳಿದ ಎನ್.ಮಹೇಶ್
21ನೇ ಶತಮಾನದಲ್ಲಿ ಇದು ನಡೆಯುತ್ತಿದೆ ಅಂದ್ರೆ, 81ರಿಂದ ಇಲ್ಲಿವರೆಗೆ 4 ತಲೆಮಾರು ಬದಲಾಗಿದೆ. ನಾಲ್ಕು ತಲೆ ಮಾರುಗಳಾದರೂ ಜಾತಿಯ ಮನಸ್ಸುಗಳು ಇನ್ನೂ ಹಾಗೆಯೇ ಉಳಿದಿದೆ ಎಂದರೆ, ಇವರಿಗೂ ಇಲ್ಲಿ ಎದುರುಗಡೆ ಕಾಣುತ್ತಿರುವ ಕಲ್ಲಿಗೂ ಏನು ವ್ಯತ್ಯಾಸ ಇದೆ? ಎಂದು ಪ್ರಶ್ನಿಸಿದರು.
ಮತ್ತೊಂದು ಸಲ ಕೋಲಾರ ಜಿಲ್ಲೆಯಲ್ಲಿ ಇಂತಹ ಘಟನೆ ನಡಿಬಾರ್ದು. ಆ ಥರದ ಮನಸ್ಥಿತಿರುವವರು, ದಯವಿಟ್ಟು ನಾನು ಕೈ ಮುಗಿದು ಕೇಳ್ತಾ ಇದ್ದೀನಿ ಚೇಂಜ್ ಆಗಿ. ನೀವು 8 ಜನ ಅರೆಸ್ಟ್ ಆಗಿ ಒಳಗೆ ಹೋಗಿದ್ದೀರಲ್ಲ, ಈಗ್ಲಾದ್ರೂ ರಿಯಲೈಸ್ಡ್ ಮಾಡಿಕೊಳ್ಳಿ. ಅವರ ಮೈಯಲ್ಲಿರೋದೂ ಕೆಂಪು ರಕ್ತನೇ ಇವರ ಮೈಯಲ್ಲಿರೋದು ಕೆಂಪು ರಕ್ತನೇ, ಕನಿಷ್ಠ ಇಷ್ಟೊಂದು ನಾಗರಿಕತೆಯ ಮನಸ್ಥಿತಿ ಇಲ್ಲದಿದ್ದರೆ, ಹೆಂಗ್ರಿ ಇದು? ಎಂದು ಪ್ರಶ್ನಿಸಿದರು.
ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯಿಂದ ಸಂತ್ರಸ್ತ ಕುಟುಂಬಸ್ಥರ ಭೇಟಿ
ಈ ಹೆಣ್ಣು ಮಗಳಿಗೆ(ಬಾಲಕನ ತಾಯಿಗೆ) ಬೆದರಿಕೆ ಹಾಕಿದ್ದಾರೆ ಅಂತ ತಿಳಿದು ಬಂತು. ಪೊಲೀಸರು ಇದನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ. ನೀವು ಸಾಮಾನ್ಯವಾಗಿ ತೆಗೆದುಕೊಳ್ಳಬೇಡಿ, ತುಂಬಾ ಸೀರಿಯಸ್ ಆಗಿ ಇದನ್ನು ಹ್ಯಾಂಡೆಲ್ ಮಾಡ್ತೀವಿ… ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.
ದೇವಸ್ಥಾನಕ್ಕೆ ಪ್ರವೇಶಿಸಿದ ಸಂದರ್ಭ
ಕಾನೂನು ಏನನ್ನು ಮಾಡಬೇಕೋ ಅದನ್ನು ಮಾಡುತ್ತದೆ. ದೌರ್ಜನ್ಯ ನಡೆದಾಗ ಪುನರ್ವಸತಿ ಮಾಡುವ ಕೆಲಸವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ತಕ್ಷಣ ಮಾಡಿದ್ದಾರೆ. ಪೊಲೀಸರು ತಕ್ಷಣವೇ ಕ್ರಮಕೈಗೊಂಡಿದ್ದಾರೆ. ಸರ್ಕಾರ ಅಲರ್ಟ್ ಆಗಿದೆ. ಇಂತಹ ಘಟನೆಗಳನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡಲ್ಲ. ಎಲ್ಲಿಯೂ ದಲಿತರು ಸಾಮರಸ್ಯ ಕೆಡಿಸುವ ಮನಸ್ಥಿತಿಯವರಲ್ಲ, ನಿಮ್ಮ ಜೊತೆಗೆ ಬದುಕಲು ನಾವು ರೆಡಿ ಇದ್ದೇವೆ. ನೀವೂ ನಮ್ಮ ಜೊತೆಗೆ ಬದುಕಲು ರೆಡಿಯಾಗಿ ಎಂದು ಎನ್.ಮಹೇಶ್ ಸವರ್ಣಿಯರಿಗೆ ಕರೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka