104 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನ ರಕ್ಷಣೆ
ರಾಯ್ಪುರ: ಕಳೆದ ನಾಲ್ಕು ದಿನಗಳಿಂದ ಕೊಳವೆ ಬಾವಿಯಲ್ಲಿ ಸಿಲುಕಿದ್ದ 11 ವರ್ಷ ವಯಸ್ಸಿನ ಬಾಲಕನನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದೆ.
ರಾಹುಲ್ ಸಾಹು ಎಂಬ ಬಾಲಕ ರಕ್ಷಿಸಲ್ಪಟ್ಟ ಬಾಲಕನಾಗಿದ್ದು, ಸತತ 104 ಗಂಟೆಗಳ ಕಾರ್ಯಾಚರಣೆ ಮೂಲಕ ಎನ್ ಡಿಆರ್ ಎಫ್ ಬಾಲಕನನ್ನು ರಕ್ಷಿಸಲು ಯಶಸ್ವಿಯಾಯಿತು.
ಛತ್ತಿಸ್ಘಡದ ಜಾಂಜ್ ಗೀರ್ ಚಂಪಾ ಜಿಲ್ಲೆಯ ಪಿಹ್ರಿದ್ ಗ್ರಾಮದಲ್ಲಿ ತಮ್ಮ ಮನೆಯ ಹಿಂಬದಿಯಲ್ಲೇ ಕೊರೆದಿದ್ದ 80 ಅಡಿ ಕೊಳವೆ ಬಾವಿಗೆ ಬಾಲಕ ಬಿದ್ದಿದ್ದ. ಬಾಲಕನನ್ನು ರಕ್ಷಿಸಲು 500ಕ್ಕೂ ಹೆಚ್ಚು ಅಧಿಕಾರಿ ವರ್ಗ ಕಾರ್ಯಾಚರಣೆ ಕೈಗೊಂಡಿತ್ತು.
ಬಾಲಕನಿಗೆ ಆಮ್ಲಜನಕ ಪೂರೈಕೆಗಾಗಿ ಪೈಪ್ ಲೈನ್ ಅಳವಡಿಸಲಾಗಿತ್ತು. ರಾಹುಲ್ನ ಪ್ರತಿ ನಡೆಯ ಮೇಲೆ ನಿಗಾ ಇಡಲು ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿ, ಆಹಾರ ಪದಾರ್ಥಗಳನ್ನೂ ನೀಡಲಾಗಿತ್ತು. ಸದ್ಯ ಬಾಲಕನನ್ನು ರಕ್ಷಿಸಿದ್ದು ಬಿಲಾಸ್ಪುರ ಜಿಲ್ಲೆಯ ಅಪೊಲೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬಿಲಾಸ್ಪುರ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕರ್ತವ್ಯ ನಿರತ ಪೊಲೀಸ್ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು!
ಕಾಶ್ಮೀರ ಹತ್ಯಾಕಾಂಡಕ್ಕೂ ದನ ಸಾಗಾಟದ ಹೆಸರಿನ ಹತ್ಯಾಕಾಂಡಕ್ಕೂ ವ್ಯತ್ಯಾಸವಿಲ್ಲ: ನಟಿ ಸಾಯಿ ಪಲ್ಲವಿ
ಅಲ್ಪಸಂಖ್ಯಾತ ಸಮಾವೇಶದಲ್ಲಿ ಎಂಟಿಬಿ ‘ನಾಗಿಣಿ’ ಡಾನ್ಸ್!
ನರೇಂದ್ರ ಮೋದಿ ನಾಯಿಗಿಂತಲೂ ಕಡೆಯಾಗಿ ಸಾಯುತ್ತಾನೆ: ನಾಲಿಗೆ ಹರಿಯಬಿಟ್ಟ ಕಾಂಗ್ರೆಸ್ ನಾಯಕ