ಕೊಲೆ ಆರೋಪಿ ವಿನಯ್ ಕುಲಕರ್ಣಿ ಜಾಮೀನಿನಲ್ಲಿ ಬಿಡುಗಡೆ | ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ದೊರೆತಿದ್ದು, ಇದಾದ ಬಳಿಕ ಆಗಸ್ಟ್ 19ರಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿಯೂ ಜಾಮೀನು ದೊರೆತಿತ್ತು. ಈ ಹಿನ್ನೆಲೆಯಲ್ಲಿ ಇಂದು ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇನ್ನೂ ಜೈಲಿನಿಂದ ಬಿಡುಗಡೆಯಾದ ವೇಳೆ ಮಾತನಾಡಿದ ಅವರು, ನಾನು ನಿರ್ದೋಷಿಯಾಗಿ ಬಿಡುಗಡೆಯಾಗುವ ವಿಶ್ವಾಸ ನನಗಿತ್ತು. ಹಾಗಾಗಿ ನನಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ, ನನ್ನನ್ನ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. 9 ತಿಂಗಳ ಬಳಿಕ ನನಗೆ ಜಾಮೀನು ಸಿಕ್ಕಿದೆ. ಉಳಿದ ರಾಜಕಾರಣಿಗಳೇ ಬೇರೆ, ನಾನೇ ಬೇರೆ.ನನ್ನ ಜೊತೆಗೆ ಕಟ್ಟಕಡೆಯ ವ್ಯಕ್ತಿಗಳಿಂದ ಹಿಡಿದು ಶ್ರೀಮಂತರವರೆಗೆ ಜನ ಇದ್ದಾರೆ ಎಂದು ಅಭಿಪ್ರಾಯಪಟ್ಟರು.
ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ನೆರೆದಿದ್ದು, ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಂಭ್ರಮಿಸಿದರು. ಜೈಲಿನ ಮುಂಭಾಗದಲ್ಲಿಯೇ ನೆರೆದ ಕಾರ್ಯಕರ್ತರು, ವಿನಯ್ ಕುಲಕರ್ಣಿಗೆ ಭರ್ಜರಿ ಸ್ವಾಗತ ನೀಡಿದರು. ಆ್ಯಪಲ್ ಹಾರ ಹಾಕಿ ಸಂಭ್ರಮಿಸಿದರು.
ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ, ಸಾವಿರಾರು ಜನರು ಮೆರವಣಿಗೆ ನಡೆಸುವ ಮೂಲಕ ಕರ್ಫ್ಯೂ ಉಲ್ಲಂಘಿಸಲಾಗಿದೆ. ಸ್ಥಳದಲ್ಲಿದ್ದ ಬೆರಳೆಣಿಕೆಯ ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುವಂತಾಗಿತ್ತು. ಕಾರ್ಯಕರ್ತರ ಮೆರವಣಿಗೆಯ ವೇಳೆ ವಿನಯ್ ಕುಲಕರ್ಣಿ ಮೀಸೆ ತಿರುವಿ ಪೋಸ್ ನೀಡಿದರು.
ಇನ್ನಷ್ಟು ಸುದ್ದಿಗಳು…
ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ
ಪಾಕಿಸ್ತಾನ ಪರ ಘೋಷಣೆ: ಮೊಹರಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 6 ಯುವಕರ ಬಂಧನ
ನೋ ಪಾರ್ಕಿಂಗ್ ನಲ್ಲಿದ್ದ ಸವಾರ ಸಹಿತ ಬೈಕ್ ನ್ನು ಹೊತ್ತೊಯ್ದ ಟ್ರಾಫಿಕ್ ಪೊಲೀಸರು!
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯುತ್ತಾರಾ ನಳಿನ್ ಕುಮಾರ್ ಕಟೀಲ್?
ಗುಂಪುಗೂಡಬಾರದು ಎನ್ನುತ್ತಲೇ ಬಿಜೆಪಿ ಜನಾಶೀರ್ವಾದ ಜಾತ್ರೆಯ ಬಗ್ಗೆ ಮೌನ ವಹಿಸಿದ ಸಿಎಂ ಬೊಮ್ಮಾಯಿ
ಲೈಂಗಿಕ ಬಯಕೆ ಈಡೇರಿಸಲು ಹೋಗುತ್ತಿದ್ದ ಪುರುಷರಿಗೆ ಬಿಗ್ ಶಾಕ್ ನೀಡುತ್ತಿದ್ದ ಮಹಿಳೆಯರು !