ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು: ಮಾಜಿ ಸಚಿವ ಈಶ್ವರಪ್ಪ - Mahanayaka
10:31 PM Wednesday 5 - February 2025

ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು: ಮಾಜಿ ಸಚಿವ ಈಶ್ವರಪ್ಪ

eshwarappa
29/06/2022

ಶಿವಮೊಗ್ಗ: ರಾಷ್ಟ್ರಭಕ್ತ ಹಿಂದೂಗಳನ್ನು ಹೇಡಿಗಳ ರೂಪದಲ್ಲಿ ಕೊಲೆ ಮಾಡಲಾಗುತ್ತಿದೆ. ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಕೊಲೆ ಪ್ರಕರಣ ಖಂಡಿಸಿ ಶಿವಮೊಗ್ಗ ನಗರ ಬಿಜೆಪಿಯಿಂದ ವಪ್ಪನಾಯಕ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಭೆಯಲ್ಲಿ ಮಾತನಾಡಲು ನೋವಾಗುತ್ತೆ. ಸ್ವತಂತ್ರ ಭಾರತದಲ್ಲಿ ಇಂತಹ ಸಭೆ ನಡೆಯಬೇಕಾ ಎನ್ನುವುದು ದೇಶ ಭಕ್ತರ ಪ್ರಶ್ನೆ ಎಂದರು.

ಪ್ರಧಾನಿ ಮೋದಿಯವರಿಗೆ ನಾನು ಮನವಿ ಮಾಡ್ತೇನೆ. ರಾಷ್ಟ್ರಭಕ್ತ ಹಿಂದೂಗಳನ್ನು ಹೇಡಿಗಳ ರೂಪದಲ್ಲಿ ಕೊಲೆ ಮಾಡಲಾಗುತ್ತಿದೆ. ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು. ಸಂವಿಧಾನಬದ್ಧವಾಗಿ ಗಲ್ಲುಶಿಕ್ಷೆ ಅಥವಾ ಗುಂಡಿಟ್ಟು ಕೊಲ್ಲುವ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಒಬ್ಬನೇ ಇದ್ದಾಗ ಹೋಗಿ ದೊಡ್ಡ ಗಂಡಸರ ರೀತಿ ಕೊಲೆ ಮಾಡಿ ಹೋಗಿದ್ದಾರೆ. ಕೊಲೆ ಮಾಡಿದ್ದೇವೆ ಎಂದು ಅವರೇ ಒಪ್ಪಿಕೊಂಡ ಮೇಲೆ ಕೋರ್ಟ್ಗೆ ಕರೆಸಿ ಕೇಳೋದಾದ್ರೂ ಏನು..? ಎರಡು ಬಾರಿ ಕರೆಸಿದರೂ ಅವರು ಅದನ್ನೇ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ ಟೈಲರ್ ನ ಬರ್ಬರ ಹತ್ಯೆ!

ನಟಿ ಪವಿತ್ರ ಲೋಕೇಶ್ 3ನೇ ಮದುವೆಯ ವದಂತಿ: ಕಾನೂನು ಸಮರಕ್ಕೆ ಮುಂದಾದ ನಟಿ

ಮನೆ ಮಾಲಿಕ ಸುಖ ನಿದ್ದೆಯಲ್ಲಿದ್ದ: ಹಸಿದು ಬಂದ ಆನೆ ಗೋಡೆಯನ್ನೇ ಒಡೆದು ಹಾಕಿತು!

ಹೀನಾಯ ಸೋಲಿನ ನಂತರ ಒಟಿಟಿಗೆ ಕಾಲಿಟ್ಟ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’!

 

ಇತ್ತೀಚಿನ ಸುದ್ದಿ