ಕೊಲೆಗಡುಕರ ಸಾವಿನ ನಂತರವೇ ಹರ್ಷನಿಗೆ ಶಾಂತಿ: ಪ್ರಮೋದ್ ಮುತಾಲಿಕ್ - Mahanayaka
9:17 AM Thursday 12 - December 2024

ಕೊಲೆಗಡುಕರ ಸಾವಿನ ನಂತರವೇ ಹರ್ಷನಿಗೆ ಶಾಂತಿ: ಪ್ರಮೋದ್ ಮುತಾಲಿಕ್

muthalik
24/02/2022

ಮಂಡ್ಯ: ಕೊಲೆಗಡುಕರ ಸಾವಿನ ನಂತರವೇ ಹರ್ಷನಿಗೆ ಶಾಂತಿ ದೊರೆಯುತ್ತದೆ ಎಂದು ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ  ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ಹರ್ಷನನ್ನು ಮೋಸದಿಂದ ಕೊಲೆ ಮಾಡಿದ್ದಾರೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುವುದಿಲ್ಲ, ಕೊಲೆಗಡುಕರ ಸಾವಿನ ನಂತರವೇ ಹರ್ಷನಿಗೆ ಶಾಂತಿ ದೊರೆಯುತ್ತದೆ ಎಂದು ಅವರು ಹೇಳಿದರು.

ಕಾವೇರಿ ನದಿಗೆ ಹರ್ಷನ ಅಸ್ಥಿ ವಿಸರ್ಜಿಸಿದ ಬಳಿಕ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಷ್ಟ್ರವಾದಿ ತನ್ನ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದಾನೆ ಎನ್ನುವ ನೋವಿದೆ. 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಇಸ್ಲಾಮಿಕ್ ಶಕ್ತಿಗಳು ಬಲಿ ತೆಗೆದುಕೊಂಡಿದೆ. ಹಿಂದುತ್ವವನ್ನು ನಾಶ ಮಾಡಲು ಈ ಕೊಲೆ ಮಾಡಿದ್ದಾರೆ. ನಾವು ಹಿಂದುತ್ವದ ಕಾರ್ಯವನ್ನು ಪೂರ್ಣ ಮಾಡುತ್ತೇವೆ ಎಂದರು.

ಎಸ್ ಡಿಪಿಐ, ಪಿಎಫ್ ಐ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿಡಬೇಕು. ಇಲ್ಲವಾದರೆ ನಾವು ಹದ್ದು ಬಸ್ತಿನಲ್ಲಿಡುತ್ತೇವೆ. ಮಚ್ಚು ಹಿಡಿದು ಓಡಾಡಲು ಇದು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನವಲ್ಲ. ನೀವು ಮಚ್ಚು ಹಿಡಿದ್ರೆ, ನಮಗೂ ಎರಡು ಕೈಗಳಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಗ್ನಿ ಅವಘಡ: ಕಟ್ಟಡದಿಂದ ಜಿಗಿದು ಜೀವ ಉಳಿಸಿಕೊಂಡ ತಾಯಿ, ಮಗಳು

ರಷ್ಯಾ ಆಕ್ರಮಣ ಆರಂಭ: ಉಕ್ರೇನ್​ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ

ಕಾರಿನ ಗಾಜು ಒಡೆದು ಹಣ, ದುಬಾರಿ ವಾಚ್ ಕಳವು; 6 ತಿಂಗಳ ಬಳಿಕ ಆರೋಪಿ ಬಂಧನ

ನವವಿವಾಹಿತೆ ಟೆಕ್ಕಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಆರೋಪ

ರಷ್ಯಾ ವಿರುದ್ಧ ಪ್ರತಿದಾಳಿ: ಐದು ವಿಮಾನ, ಒಂದು ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್’

 

ಇತ್ತೀಚಿನ ಸುದ್ದಿ