ಕೋಳಿ ಸಾರಿಗಾಗಿ ಪತ್ನಿಯನ್ನು ಇರಿದುಕೊಂದ ಪಾಪಿ! - Mahanayaka
2:04 AM Wednesday 5 - February 2025

ಕೋಳಿ ಸಾರಿಗಾಗಿ ಪತ್ನಿಯನ್ನು ಇರಿದುಕೊಂದ ಪಾಪಿ!

kenchappa shila
10/06/2022

ದಾವಣಗೆರೆ: ಕೋಳಿ ಸಾರು ಮಾಡಿ  ಕೊಟ್ಟಿಲ್ಲ ಎಂದು ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿದ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ  ನಡೆದಿದೆ.

ಕೆಂಚಪ್ಪ ಎಂಬಾತ ಹತ್ಯೆಯ ಆರೋಪಿಯಾಗಿದ್ದು, 9 ವರ್ಷಗಳ ಹಿಂದೆ ಶೀಲಾ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆಯಾದ ಕೆಲವು ಸಮಯಗಳ ನಂತರ ಕುಡಿತದ ಮತ್ತಿನಲ್ಲಿ ಪತ್ನಿಯ ಜೊತೆಗೆ ದಿನವೂ ಜಗಳ ಆರಂಭಿಸಿದ್ದ ಎನ್ನಲಾಗಿದೆ.

ಕೋಳಿ ಸಾರು ಮಾಡಿಕೊಡು ಎಂದು ಪತ್ನಿಯ ಜೊತೆಗೆ ಜಗಳವಾಡಿದ್ದ ಕೆಂಚಪ್ಪ, ಪತ್ನಿ ಸಾರು ಮಾಡಿಕೊಡುವುದಿಲ್ಲ ಎಂದಾಗ ಕೋಪಗೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಹತ್ಯೆಯ ಬಳಿಕ  ಚಾಕು ಹಿಡಿದುಕೊಂಡು ಪೊಲೀಸ್ ಠಾಣೆಗೆ ತೆರಳಿದ ಕೆಂಚಪ್ಪ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರವಾದಿ ವಿರುದ್ಧ ಹೇಳಿಕೆ ವಿರುದ್ಧ ಸಿಡಿದೆದ್ದ ಮುಸ್ಲಿಮರ ಪ್ರತಿಭಟನೆ ಬಗ್ಗೆ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದೇನು?

ಉಕ್ರೇನ್‌ ಗಾಗಿ ಹೋರಾಡಿದ ವಿದೇಶಿಯರಿಗೆ ಮರಣದಂಡನೆ ನೀಡಿದ ರಷ್ಯಾ

ವಿಚಾರಣೆ ವೇಳೆ ನ್ಯಾಯಾಲಯದ ಕೊಠಡಿಗೆ ನೂರಾರು ಜಿರಳೆ ಬಿಟ್ಟ ಮಹಿಳೆ

ಪುತ್ರಿಯ ಬೀದಿ ರಂಪಾಟಕ್ಕೆ ಅರವಿಂದ್ ಲಿಂಬಾವಳಿ ಹೇಳಿದ್ದೇನು?

ಇತ್ತೀಚಿನ ಸುದ್ದಿ