ಕೋಳಿಯನ್ನು ಜೀವಂತವಾಗಿ ಅಂಗಾಂಗ ಕಿತ್ತು ಕೊಂದ ಕೋಳಿ ಅಂಗಡಿ ಮಾಲಿಕ ಅರೆಸ್ಟ್!

manu
29/04/2022

ತಿರುವನಂತಪುರಂ:  ಕೋಳಿಯ ಅಂಗಾಂಗಗಳನ್ನು ಜೀವಂತವಾಗಿಯೇ ಮುರಿದು ಭೀಕರವಾಗಿ ಕೊಂದ ಕೋಳಿ  ಅಂಗಡಿ ಮಾಲಿಕನನ್ನು  ಕೊಲ್ಲಂಕೋಡು ಪೊಲೀಸರು ತಮಿಳುನಾಡಿನ ಕೊಲ್ಲಂಗೋಡಿನ ಕನ್ನನಕಂನಲ್ಲಿ ಬಂಧಿಸಿದ್ದಾರೆ.

36 ವರ್ಷ ವಯಸ್ಸಿನ ಮನು ಬಂಧಿತ ಆರೋಪಿಯಾಗಿದ್ದು, ಈತ ಕೋಳಿಯನ್ನು ಜೀವಂತವಾಗಿ ಅಂಗಾಂಗಗಳನ್ನು ಮುರಿದು ಭೀಕರವಾಗಿ ಹತ್ಯೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.

ವರದಿಗಳ ಪ್ರಕಾರ ಕೋಳಿ ಮಾಂಸ ಕೊಂಡುಕೊಳ್ಳಲು ಬಂದಿದ್ದ ಯುವಕ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಘಟನೆ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಕೋಳಿಯನ್ನು ಒಂದೇ ಏಟಿಗೆ ಕುತ್ತಿಗೆಗೆ ಹೊಡೆದು ಕೊಲ್ಲುತ್ತಾರೆ. ಆದರೆ ಆರೋಪಿಯು ಕೋಳಿಯ ಕಾಲು, ರೆಕ್ಕೆಗಳನ್ನು ಮುರಿದು ಬಳಿಕ ಕುತ್ತಿಗೆಯನ್ನು ಮುರಿದು ಅತ್ಯಂತ ಹಿಂಸಾತ್ಮಕವಾಗಿ ಕೋಳಿಯನ್ನು ಕೊಲ್ಲುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೇರಳ ರಾಜ್ಯ ಕೋಳಿ ವರ್ತಕರ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಈತನ ಕೃತ್ಯದಿಂದಾಗಿ ಇತರ ಕೋಳಿ ವರ್ತಕರಿಗೂ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಆರೋಪಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೂರು ನೀಡಲು ಬಂದಿದ್ದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್  ಅಧಿಕಾರಿ!

160 ಭಾಷೆಗಳಲ್ಲಿ ತೆರೆಕಾಣಲಿದೆ ಅವತಾರ್‌ 2: ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್

ಲಾರಿಗಳ ಮುಖಾಮುಖಿ ಡಿಕ್ಕಿ: ಇಬ್ಬರು ಲಾರಿ ಚಾಲಕರ ದಾರುಣ ಸಾವು

ಕುಡಿದು ಪ್ರಜ್ಞೆ ಇಲ್ಲದೇ ಬಿದ್ದ ವರ: ತನ್ನ ಸಂಬಂಧಿಯನ್ನೇ ಮದುವೆಯಾದ ವಧು!

18 ದಿನಗಳ ಕಣ್ಣಾಮುಚ್ಚಾಲೆ ಬಳಿಕ ಸಿಐಡಿಗೆ ಸಿಕ್ಕಿ ಬಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ

ಇತ್ತೀಚಿನ ಸುದ್ದಿ

Exit mobile version