ಕೊಲ್ಲೂರು: ನದಿಯಲ್ಲಿ ಮುಳುಗಿ ಕೇರಳ ಮೂಲದ ವ್ಯಕ್ತಿ ಮೃತ್ಯು
01/09/2023
ಕೊಲ್ಲೂರು: ಕೊಲ್ಲೂರು ದೇವರ ದರ್ಶನಕ್ಕೆ ಬಂದಿದ್ದ ಕೇರಳದ ವ್ಯಕ್ತಿಯೊಬ್ಬರು ಸೌಪಾರ್ಣಿಕ ಸ್ನಾನ ಘಟ್ಟದಲ್ಲಿ ಮುಳುಗಿ ಮೃತಪಟ್ಟ ಘಟನೆ ಆ.30ರಂದು ನಡೆದಿದೆ.
ಕೇರಳ ಎರ್ನಾಕುಲಾಂ ಜಿಲ್ಲೆಯ ಅಶೊಕನ್ (55) ಮೃತ ದುದೈರ್ವಿ. ಇವರು ಕೊಲ್ಲೂರಿಗೆ ಬಂದು ದೇವರ ದರ್ಶನ ಮುಗಿಸಿ ಸೌಪಾರ್ಣಿಕ ಸ್ನಾನ ಘಟ್ಟದಲ್ಲಿ ತೀರ್ಥ ಸ್ನಾನ ಮಾಡಲು ನದಿ ಬಳಿ ಹೋಗಿದ್ದರು.
ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ