ಹಲಾಲ್-ಕಟ್ ವಿವಾದ: ಕೊಲ್ಲುವ ಮಾರ್ಗಗಳ ಬಗ್ಗೆ ಹೋರಾಟ ಬೇಕೆ? | ನಟ ಚೇತನ್ ಪ್ರಶ್ನೆ
ಬೆಂಗಳೂರು: ರಾಜ್ಯದಲ್ಲಿ ಹಲಾಲ್-ಕಟ್ ಮಾಂಸ ನಿಷೇಧಿಸಲು ನೀಡಿರುವ ಕರೆ ವಿಚಾರವಾಗಿ ನಟ ಅಹಿಂಸಾ ಚೇತನ್ ಪ್ರತಿಕ್ರಿಯಿಸಿದ್ದು, ಕೊಲ್ಲುವ ಮಾರ್ಗಗಳ ಬಗ್ಗೆ ಹೋರಾಡುವ ಬದಲು ಜೀವ ರಕ್ಷಿಸುವ ಕೆಲಸ ಮಾಡಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕದಲ್ಲಿನ ಹಿಂದುತ್ವ ಸಂಘಟನೆಗಳು ‘ಹಲಾಲ್’ – ಕಟ್ ಮಾಂಸ ಮಾರಾಟಗಾರರನ್ನು ನಿಷೇಧಿಸಲು, ‘ಝಟ್ಕಾ’ – ಕಟ್ ಮಾಂಸವನ್ನು ಒತ್ತಾಯಿಸಿ ದಂಗೆ ಎಬ್ಬಿಸುತ್ತಿದ್ದಾರೆ. ನಾವು ಕೊಲ್ಲುವ ಮಾರ್ಗಗಳ ಬಗ್ಗೆ ಹೋರಾಡುವ ಬದಲು, ಹೆಚ್ಚಿನ ಜೀವಗಳನ್ನು ರಕ್ಷಿಸುವ ಕೆಲಸ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬುದ್ಧನ ‘ಅಹಿಂಸೆಯ’ ಅಗತ್ಯವಿದೆಯೇ ಹೊರತು, ಕೋಮು ದ್ವೇಷದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯುಗಾದಿ ದಿನವೇ ಭೀಕರ ಅಪಘಾತ: ಇಬ್ಬರ ದಾರುಣ ಸಾವು
ಮೈಸೂರಿನಲ್ಲಿ ಅಬ್ಬರಿಸಿದ ಮಳೆ: ಮರ ಉರುಳಿ ಬಿದ್ದು ಮಹಿಳೆ ಸಾವು
ನಾಪತ್ತೆಯಾಗಿದ್ದ ಪೌರ ಕಾರ್ಮಿಕನ ಮೃತದೇಹ ಪತ್ತೆ
ಯುಗಾದಿ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಎಲ್ಲೆಲ್ಲಿ ಎಷ್ಟು ಬೆಲೆ ಏರಿಕೆ?