ಕೊಂಡ ಹಾಯುವಾಗ ಕೆಂಡಕ್ಕೆ ಜಾರಿ ಬಿದ್ದು ಪೂಜಾರಿ ಗಂಭೀರ

konda
24/03/2022

ಮಂಡ್ಯ: ಪೂಜಾರಿ ಒಬ್ಬರು ಕೊಂಡ ಹಾಯುವಾಗ ಜಾರಿ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಮಡಹಳ್ಳಿಯಲ್ಲಿ ನಡೆದಿದೆ.

ದೇವರ ಗುಡ್ಡಪ್ಪ ನಿಂಗರಾಜು ಕೊಂಡಕ್ಕೆ ಬಿದ್ದ ಪೂಜಾರಿ. ತಮಡಹಳ್ಳಿ ಗ್ರಾಮದ ಮೂಕ ಮಾರಮ್ಮ ಹಬ್ಬದ ಕೊಂಡೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೊಂಡ ಹಾಯುವಾಗ ಗುಡ್ಡಪ್ಪ ನಿಂಗರಾಜು ಮುಗ್ಗರಿಸಿ ಕೆಂಡಕ್ಕೆ ಬಿದ್ದಿದ್ದಾರೆ.

ತಕ್ಷಣ ಸ್ಥಳದಲ್ಲಿದ್ದ ಭಕ್ತರು ಪೂಜಾರಿಯನ್ನು ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version