ಕೊನೆಗೂ ಪೊಲೀಸರ ಬಲೆಗೆ ಬಿದ್ದಳು ಮೂವರು ವೃದ್ಧರನ್ನು ಮದುವೆಯಾಗಿ ವಂಚಿಸಿದ ಮಹಿಳೆ
03/11/2020
ಔರಂಗಬಾದ್: ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡವರೆಲ್ಲ ಒಂದು ಕಡೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಇನ್ನೊಂದೆಡೆಯಲ್ಲಿ ಕ್ರೈಮ್ ಗೆ ಇಳಿದಿದ್ದಾರೆ. ಇಲ್ಲೊಬ್ಬಳ 27 ವರ್ಷದ ಮಹಿಳೆ ಮೂವರು ವೃದ್ಧರನ್ನು ಮದುವೆಯಾಗಿ ವಂಚಿಸಿದ್ದು, ಇದೀಗ ಆಕೆಯನ್ನು ಔರಂಗಬಾದ್ ಪೊಲೀಸರು ಬಂಧಿಸಿದ್ದಾರೆ.
ವಿಜಯ ಅಮೃತ್(27) ಬಂಧಿತ ಮಹಿಳೆಯಾಗಿದ್ದಾಳೆ. ಈಕೆ ಮೂವರನ್ನು ವಿವಾಹವಾಗಿ ಬಳಿಕ ವಂಚನೆ ಎಸಗಿದ್ದಾಳೆ. ಪತ್ನಿಯರನ್ನು ಕಳೆದುಕೊಂಡ ಹಿರಿಯ ವಯಸ್ಸಿನ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದ ಈಕೆ ಅವರ ವಿಶ್ವಾಸಗಳಿಸಿ ಬಳಿಕ ಅವರಿಗೆ ಸ್ವತ್ತುಗಳು, ಹಣ ಮೊದಲಾದವುಗಳನ್ನು ದೋಚಿ ಪರಾರಿಯಾಗುತ್ತಿದ್ದಳು.
ಈವರೆಗೆ ಈಕೆ ಇದೇ ರೀತಿಯಾಗಿ ಮೂವರನ್ನು ಮದುವೆಯಾಗಿ ವಂಚನೆ ಮಾಡಿದ್ದಾಳೆ. ಈಕೆಯನ್ನು ಮೂರನೇ ಬಾರಿಗೆ ಮದುವೆಯಾದ ನಾಸಿಕ್ ಜಿಲ್ಲೆಯ ಯೋಗೇಶ್ ಶಿರ್ಸಾತ್ ಎಂಬಾತ ನೀಡಿದ ದೂರಿನಂತೆಯೇ ಔರಂಗಬಾದ್ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ.
►ಮಹಾನಾಯಕ ಮಾಧ್ಯಮದ ಎಲ್ಲ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಗಳಿಗೆ ಜಾಯಿನ್ ಆಗಿ
https://chat.whatsapp.com/HeAiP3WAQfT6ajtrJVJ4kP