ಕೊನೆಗೂ ಸೋಲೊಪ್ಪಿಕೊಂಡು ಹೊರ  ನಡೆದ  ಡೊನಾಲ್ಡ್ ಟ್ರಂಪ್ - Mahanayaka
12:23 AM Thursday 26 - December 2024

ಕೊನೆಗೂ ಸೋಲೊಪ್ಪಿಕೊಂಡು ಹೊರ  ನಡೆದ  ಡೊನಾಲ್ಡ್ ಟ್ರಂಪ್

24/11/2020

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ  ಫಲಿತಾಂಶದ ಬಳಿಕ ನಾನು ಸೋತಿಲ್ಲವೆಂದು  ವಾದಿಸುತ್ತಿದ್ದ, ಶಾಂತಿಯುತವಾಗಿ ಅಧಿಕಾರ ಬಿಟ್ಟುಕೊಡುವುದಿಲ್ಲವೆಂದು  ಹೇಳುತ್ತಿದ್ದ ಟ್ರಂಪ್  ಇದೀಗ ಕೊನೆಗೂ ತಮ್ಮ ಸೋಲೊಪ್ಪಿಕೊಂಡು ಅಮೆರಿಕದ ಅಧಿಕಾರದ ಪರಿವರ್ತನೆ ಕಾರ್ಯ ಆರಂಭಿಸುವಂತೆ ಸೂಚಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಅಧಿಕಾರಿಗಳಿಗೆ ಅಧಿಕಾರ, ಆಡಳಿತ ಪರಿವರ್ತನೆ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸಿದ್ದಾರೆ. ಜೊ ಬೈಡನ್ ಅವರಿಗೆ ಶ್ವೇತಭವನಕ್ಕೆ ಕಾಲಿಡಲು ಅಗತ್ಯವಾದ ಸರ್ಕಾರದ ಸಂಪನ್ಮೂಲಗಳನ್ನು ಒದಗಿಸಲು ಮುಂದಾಗಿರುವುದಾಗಿ ಫೆಡರಲ್ ಏಜೆನ್ಸಿಯ ಮುಖ್ಯಸ್ಥರು ಹೇಳಿದ್ದಾರೆ.

ಆದರೂ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಜೊ ಬೈಡನ್ ವಿರುದ್ಧ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ