ಕೊನೆಗೂ ತನ್ನನ್ನು ತಾನೇ ಮದುವೆಯಾಗಿ ಸಪ್ತಪದಿ ತುಳಿದ ಯುವತಿ
![bindu](https://www.mahanayaka.in/wp-content/uploads/2022/06/bindu-1.jpg)
ಗುಜರಾತ್ ;ಭಾರೀ ಸಂಚಲ ಮೂಡಿಸಿದ್ದ ಗುಜರಾತ್ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೂ ತಮ್ಮ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸ್ತ್ರೋಕ್ತವಾಗಿ ನಿನ್ನೆ ತಮ್ಮನ್ನೇ ತಾವು ಮದುವೆ ಮಾಡಿಕೊಂಡಿದ್ದಾರೆ.
ಜೂನ್ 11 ರಂದು ಮದುವೆ ಆಗಬೇಕು ಎಂದುಕೊಂಡಿದ್ದಳು ಕ್ಷಮಾ ಬಿಂದು . ಆದರೆ ಈ ವಿವಾಹಕ್ಕೆ ಹಲವರ ವಿರೋಧ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚಿತವಾಗಿಯೇ ಮದುವೆ ಆಗಿದ್ದಾಳೆ.
ಕ್ಷಮಾ ಬಿಂದು ಏಕಾಂಗಿಯಾಗಿ ವಿವಾಹ ಆಗುತ್ತಿರೋದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಿಂದೂ ಧರ್ಮದಲ್ಲಿ ಇಂತಹ ಮದುವೆಗೆ ಅವಕಾಶವಿಲ್ಲ. ಆದ್ದರಿಂದ ದೇವಸ್ಥಾನದಲ್ಲಿ ಇಂತಹ ಮದುವೆಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದ್ದರು.
ದೇವಾಲಯದಲ್ಲಿ ಮದುವೆ ಆಗಲು ವಿರೋಧ ವ್ಯಕ್ಯವಾದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿಯೇ ಹಿಂದೂ ಸಂಪ್ರದಾಯದ ಪ್ರಕಾರ ತಮ್ಮನ್ನ ತಾವೇ ವರಿಸಿಕೊಂಡಿದ್ದಾರೆ.ಇವರ ವಿವಾಹ ಕಾರ್ಯಕ್ರಮಕ್ಕೆ ಸ್ನೇಹಿತರು, ಸಂಬಂಧಿಕರು ಸಾಕ್ಷಿಯಾಗಿದ್ದಾರೆ. ಇನ್ನು ಮೊದಲೆ ಹೇಳಿದಂತೆ ತನ್ನಿಷ್ಟದಂತೆ ತನ್ನ ಜೊತೆನೇ ಗೋವಾಕ್ಕೆ ಹನಿಮೂನ್ ಕೂಡ ಹೋಗೋ ಪ್ಲಾನ್ ಒಂದೇ ಈಗ ಬಾಕಿ ಉಳಿದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸ್ವಾಮೀಜಿಗಳ ವೇಷ ತೊಟ್ಟು ದುಡ್ಡು ಕಲೆಕ್ಷನ್: ಮೂವರ ಬಂಧನ
ಮಗುವಿನ ಕೈಕಾಲು ಕಟ್ಟಿ ಬಿರುಬಿಸಿಲಿನಲ್ಲಿ ಮಲಗಿಸಿದ ಪಾಪಿ ತಾಯಿ!
ಕೇರಳದಲ್ಲಿ ಪತ್ತೆಯಾದ ಜೀರುಂಡೆ ಜ್ವರ: ವಿದ್ಯಾರ್ಥಿ ಸಾವು
ಖ್ಯಾತ ನಟಿ ನಯನತಾರಾ, ವಿಘ್ನೇಶ್ ಶಿವ ಅದ್ದೂರಿ ವಿವಾಹ
ಪ್ರೇಯಸಿಯ ಮೇಲಿನ ಕೋಪದಿಂದ ಮ್ಯೂಸಿಯಮ್ ಗೆ ನುಗ್ಗಿ ಪ್ರಾಚೀನ ವಸ್ತುಗಳನ್ನು ಪುಡಿಗೈದ ಯುವಕ!