ಅಪಘಾತದಲ್ಲಿ ಮೃತಪಟ್ಟ ಪುನೀತ್ ಅಭಿಮಾನಿ ಕೊನೆಯ ಕ್ಷಣದಲ್ಲಿ ಪತ್ನಿಗೆ ಹೇಳಿದ ಮಾತು ಕಣ್ಣೀರು ತರಿಸುತ್ತದೆ! - Mahanayaka
8:58 AM Tuesday 24 - December 2024

ಅಪಘಾತದಲ್ಲಿ ಮೃತಪಟ್ಟ ಪುನೀತ್ ಅಭಿಮಾನಿ ಕೊನೆಯ ಕ್ಷಣದಲ್ಲಿ ಪತ್ನಿಗೆ ಹೇಳಿದ ಮಾತು ಕಣ್ಣೀರು ತರಿಸುತ್ತದೆ!

puneeth
16/11/2021

ಕುಣಿಗಲ್: ಅಪ್ಪುವಿನಂತೆ ಅಪ್ಪುವಿನ ಅಭಿಮಾನಿಗಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು, ತನ್ನ ಸಾವಿನ ಕೊನೆಯ ಕ್ಷಣದಲ್ಲಿ ಪುನೀತ್ ಅಭಿಮಾನಿಯೊಬ್ಬರು, ತನ್ನ ಕಣ್ಣುಗಳನ್ನು ದಾನ ಮಾಡುವಂತೆ ಪತ್ನಿಗೆ ಹೇಳಿ ಕೊನೆಯುಸಿರೆಳೆದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರ ಬಿ.ಎಂ.ರಸ್ತೆ ಹನುಮಾಪುರ ಸಮೀಪದಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿರುವ 37 ವರ್ಷ ವಯಸ್ಸಿನ ಕಾಂತರಾಜು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಕುಣಿಗಲ್ ತಾಲೂಕಿನ ಯಾಚಘಟ್ಟದ ಸಂಬಂಧಿಕರ ಮದುವೆಗೆ ಆಟೋದಲ್ಲಿ ಬಂದಿದ್ದ ವೇಳೆ ಇವರಿಗೆ ಜೀಪು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಗೊಂಡಿದ್ದ ಕಾಂತರಾಜು ಅವರನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ, ಕಾಂತರಾಜು ಅವರು, ನಾನು ಪುನೀತ್ ಅಭಿಮಾನಿ. ನಾನು ಮೃತಪಟ್ಟರೆ, ನನ್ನ ಕಣ್ಣುಗಳನ್ನು ದಾನ ಮಾಡಿಬಿಡು ಎಂದು ಪತ್ನಿಗೆ ಹೇಳಿದ್ದರು ಎಂದು ವರದಿಯಾಗಿದೆ.

ಕಾಂತರಾಜು ಅವರ ಆಸೆಯಂತೆ ಕುಣಿಗಲ್ ಪಟ್ಟಣದ ಎಂ.ಎಂ. ಆಸ್ಪತ್ರೆಯಲ್ಲಿ ಅವರ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಇನ್ನೂ ಅಪಘಾತದಲ್ಲಿ ಕಾಂತರಾಜು ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

ಕುಡಿದು ತೂರಾಡುತ್ತಾ, ತೊದಲು ಮಾತನಾಡುತ್ತಾ ಶಾಲೆಗೆ ಪಾಠ ಮಾಡಲು ಬಂದ ಶಿಕ್ಷಕ

ಪ್ರತಾಪ್ ಸಿಂಹ ಹೆಣ್ಣೋ ಗಂಡೋ ಎಂದು ನೋಡಿಕೊಳ್ಳಲಿ | ಇಕ್ಬಾಲ್ ಅನ್ಸಾರಿ ತಿರುಗೇಟು

ಪ್ರವಚನ ನೀಡುತ್ತಲೇ ವೇದಿಕೆಯಲ್ಲಿಯೇ ಹೃದಯಾಘಾತದಿಂದ ನಿಧನರಾದ ಸ್ವಾಮೀಜಿ

ಮನೆಗೆ ಬಡಿದ ಸಿಡಿಲು: ವ್ಯಕ್ತಿ ದಾರುಣ ಸಾವು | ಸಮೀಪದ ಮನೆಗಳಿಗೂ ತೀವ್ರ ಹಾನಿ

ಶರಣ್ ಪಂಪ್ ವೆಲ್ ಗೆ ಮುಸ್ಲಿಮ್ ಸಂಸ್ಥೆಗಳ ಗುತ್ತಿಗೆಯ ಹಣ ಆಗುತ್ತದೆ, ಮುಸ್ಲಿಮರು ಆಗುವುದಿಲ್ಲ | ತರಾಟೆಗೆತ್ತಿಕೊಂಡ ಬಿರುವೆರ್ ಕುಡ್ಲ

ಹಂಸಲೇಖ ವಿರುದ್ಧ ಮಾತನಾಡುತ್ತಿರುವವರು ನಿಜವಾದ ದಲಿತ ವಿರೋಧಿಗಳು!

ರಚಿತಾ ರಾಮ್  “ಫಸ್ಟ್ ನೈಟ್” ಹೇಳಿಕೆಗೆ ಆಕ್ಷೇಪ: ಕ್ಷಮೆಯಾಚನೆಗೆ ಒತ್ತಾಯ

ಇತ್ತೀಚಿನ ಸುದ್ದಿ