ಕೊರಗಜ್ಜನ ವೇಷ ಹಾಕಿ ಅಪಹಾಸ್ಯ; ಮತ್ತೆ ಪ್ರಕರಣ ದಾಖಲು
ಕಾರ್ಕಳ: ಕೊರಗಜ್ಜನಿಗೆ ಅವಮಾನ ಆಗುವ ರೀತಿಯಲ್ಲಿ ವರ್ತಿಸಿರುವ ಈದುವಿನ ರವೀಂದ್ರ ಅವರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಟಸ್ ಹಾಕಿದ್ದ ಈದು ಗ್ರಾಮದ ಚೇತನ್ ರವರ ಸ್ನೇಹಿತ ಯೋಗೀಶ್ ಅವರ ಮೊಬೈಲಿಗೆ ಒಂದು ಸ್ಟೇಟಸ್ ಬಂದಿದ್ದು, ರವೀಂದ್ರ ತನ್ನ ಮೊಬೈಲಿನಲ್ಲಿ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದ.
ಕೊರಗಜ್ಜ ದೈವದ ಅವಹೇಳನ ಮಾಡಿರುವುದು ಧಾರ್ಮಿಕ ಭಾವನೆಗೆ ನೋವಾಗುವ ರೀತಿಯಲ್ಲಿದ್ದ ಕಾರಣ ಸ್ನೇಹಿತ ಯೋಗೀಶನ ಮೊಬೈಲ್ ನಿಂದ ಚೇತನ್, ರವೀಂದ್ರನ ಮೊಬೈಲ್ ಗೆ ಕರೆ ಮಾಡಿ ವಿಚಾರಿಸಿದಾಗ ರವೀಂದ್ರನು ತಾನು ಕೊರಗಜ್ಜನ ಬಗ್ಗೆ ಸ್ಟೇಟಸ್ ಹಾಕಿದ್ದೇನೆ ಏನಾಯ್ತು, ಮುಂದೆಯೂ ಇದಕ್ಕಿಂತ ಹೆಚ್ಚಿನ ರೀತಿಯ ವೇಷ ಹಾಕಿ ಸಂಭ್ರಮಿಸುತ್ತೇನೆ ಎಂದು ಮರು ಉತ್ತರ ನೀಡಿದ್ದ ಎನ್ನಲಾಗಿದೆ
ಈ ಬಗ್ಗೆ ಬಗ್ಗೆ ಚೇತನ್ ನೀಡಿದ ದೂರಿನಂತೆ ರವೀಂದ್ರನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭಾರತ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ ನಿಧನ
ಸಿಎಂ ಹತ್ಯೆ ಮಾಡುವುದಾಗಿ ಬೆದರಿಕೆ: ನಟ ಪವನ್ ಕಲ್ಯಾಣ್ ಅಭಿಮಾನಿ ಬಂಧನ
ಜ. 23ರಂದು ಸಂಪೂರ್ಣ ಲಾಕ್ ಡೌನ್ ; ಸಿಎಂ ಸ್ಟಾಲಿನ್
ಎರಡನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು
ತಾಯಿ, ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರಿಂದ ಆರೋಪ