ಭೀಮ ಕೋರೆಗಾಂವ್ ಕದನ- ಜಾತಿ ಸಂಕೋಲೆಯಿಂದ ಶಿಕ್ಷಣ ಬಿಡುಗಡೆಯಾದ ದಿನ - Mahanayaka
9:57 AM Thursday 14 - November 2024

ಭೀಮ ಕೋರೆಗಾಂವ್ ಕದನ- ಜಾತಿ ಸಂಕೋಲೆಯಿಂದ ಶಿಕ್ಷಣ ಬಿಡುಗಡೆಯಾದ ದಿನ

koregaon bhima
01/01/2022

ಪೇಶ್ವೆ ಸಾಮ್ರಾಜ್ಯಕ್ಕೆ ಚಮರಗೀತೆ ಹಾಡಿದ ಭೀಮ ಕೋರೆಗಾಂವ್ ಕದನ 1817 ಡಿಸೆಂಬರ್ 31 ರ  ರಾತ್ರಿ ಕ್ಯಾಪ್ಟನ್ ಸ್ಟಂಡನ್ ನೇತೃತ್ವದಲ್ಲಿ ಬಾಂಬೆ ಇನ್ಪೆಂಟ್ರಿಯ ಮೊದಲ ಬೆಟಾಲಿಯನ್ ನ ಸುಮಾರು 750 ಯೋಧರು ಇವರಲ್ಲಿ 500 ಮಹಾರ್ ದಲಿತರು ಮತ್ತು 250 ಉಳಿದ ಜಾತಿ ಸಮುದಾಯದ ಯೋಧರಾಗಿದ್ದರು ಇಡೀ ರಾತ್ರಿ 27 ಮೈಲುಗಳ ಕಾಲ್ನಡಿಗೆಯಲ್ಲಿ ಶಿರೂರ್ನಿಂದ ಹೊರಟ ಸೇನೆಯು 1818 ಜನವರಿ 1 ಮುಂಜಾನೆ ಭೀಮಾ ನದಿಯ ತೀರದ ಕೋರೆಗಾಂವ್ ತಲುಪಿತ್ತು.

ಆ ಹೊತ್ತಿಗಾಗಲೇ ಪೇಶ್ವೆಗಳ 20, ಸಾವಿರ ಅಶ್ವದಳ ಹಾಗೂ 8,000 ಸಾವಿರ ಪದಾತಿದಳದ ಸೈನ್ಯವು ನಾಲ್ಕು ದಿಕ್ಕಿನಿಂದಲೂ ಮುತ್ತಿಗೆ ಹಾಕಿತ್ತು. ರಾತ್ರಿ ಇಡೀ ಕಾಲ್ನಡಿಗೆಯಲ್ಲಿ ಬಂದಿದ್ದ ಬ್ರಿಟಿಷ್ ಸೈನಿಕರಿಗೆ ತಮ್ಮ ದಾಹ ತಣಿಸಲು ಸಮಯವಿರಲಿಲ್ಲ ಅಷ್ಟೊತ್ತಿಗಾಗಲೇ ರಣಕಹಳೆ ಮೊಳಗಿತ್ತು. ಉಭಯ ಸೇನೆಗಳ ನಡುವೆ ಘೋರವಾದ ಕದನದ ಪ್ರಾರಂಭದಲ್ಲೇ ಬ್ರಿಟಿಷ್ ಫಿರಂಗಿದಳದ ಮುಖ್ಯಸ್ಥ ಲೆಫ್ಟಿನೆಂಟ್ ಚಿಶೋಲಮ್ರಾನ್, ಗೆ ಹಿಂದಿನಿಂದ ದಾಳಿ ನಡೆಸಿದ ಪೇಶ್ವೆ ಸೇನೆಯ ಅರಬ್ಬರು ಸೆರೆಹಿಡಿದು ತಲೆ ಕತ್ತರಿಸಿದರು. ಮಾತ್ರವಲ್ಲ  ಬ್ರಿಟಿಷ್ ಸೇನೆಯ  ಮನೋಬಲವನ್ನು ತಗ್ಗಿಸಿ ಭೀತಿಯನ್ನುಉಂಟುಮಾಡಬೇಕೆಂದು ಆ ಕತ್ತರಿಸಿದ ತಲೆಯನ್ನು  ತಮ್ಮ ಖಡ್ಗವೊಂದಕ್ಕೆ ಸಿಕ್ಕಿಸಿಕೊಂಡು ಯುದ್ದ ಭೂಮಿಯಲ್ಲಿ ಕಣಕೇಕೆ ಹಾಕುತ್ತಾ ಚೀರಾಡತೋಡಗಿದರು. ಕೆಲವೇ ಹೊತ್ತಿನಲ್ಲಿ ಅಜಾನುಬಾಹು ಶರೀರದ ಗ್ರೆನೇಡಿಯರ್ ಅಡ್ಜಂಟ್ ಲೆಫ್ಟಿನಂಟ್ ಪ್ಯಾಟಿನ್ಸನ್, ಗಾಯಾಳಾಗಿದ್ದ ಬಳಿಕ ಒಬ್ಬರಂತ್ತೊಬ್ಬರು ಬ್ರಿಟಿಷ್ ಅಧಿಕಾರಿಗಳಾದ ಲೆಫ್ಟಿನೆಂಟ್ ಕೋನ್ಲೆಲೆನ್ ಆಸಿಸ್ಟೆಂಟ್ ವುಯಿಂಗೆಟ್, ಕ್ಯಾಪ್ಟನ್ ಸ್ಟಂಡನ್ ಮೊದಲಾದವರೂ ಗಾಯಾಳುಗಳಾದರು.

ಮಧ್ಯಾಹ್ನದ ಹೊತ್ತಿಗಾಗಲೇ ಬ್ರಿಟಿಷ್ ಸೇನೆಯಲ್ಲಿದ್ದ ಮಾರಾಠರು, ರಜಪೂತರು, ಪಠಾಣರು, ಕ್ರಿಶ್ಚಿಯನ್ನರು ಮತ್ತು ಇನ್ನಿತರೇ ಸಮುದಾಯದ ಸೈನಿಕರು ಗಾಯಗೊಂಡಿದ್ದರು. ಮುಂದೆ ಇಡೀ ಮಹಾರ್ ಸೈನಿಕರ ನೇತೃತ್ವವನ್ನು ರತನಾಕ್, ಜತನಾಕ್, ಭೀಮನಾಕ್ ವಹಿಸಿಕೊಂಡು  ಪೇಶ್ವೆಗಳ ಸೈನ್ಯದ ಮೇಲೆ ಘೋರ ಆಕ್ರಮಣಕಾರಿ ದಾಳಿಯನ್ನು ನಡೆಸಿದರು. ಇತಿಹಾಸವೇ ಕಂಡು ಕೇಳರಿಯದ  ರೀತಿಯಲ್ಲಿ ಯುದ್ದವನ್ನು ಮಹಾರ್ ಸೈನಿಕರು ಜಯಿಸಿದರು. ಸೂರ್ಯ ಮುಳುಗುವ ಹೊತ್ತಿಗೆ ಪೇಶ್ವೆಗಳ ನಾಯಕ ಎರಡನೇ ಬಾಜಿರಾವ್ ವೇಶ್ವೆಯು ಪಲಾಯನ ಮಾಡಿದನು.  ತದನಂತರ ತ್ರೈಯಂಭಕಡೆಂಗಳೆ, ಮಿಂಚೂರಕರ ಶಿಂಧೆ, ಹೋಳ್ಕರರು ಕೂಡ ಯುದ್ದದಲ್ಲಿ ಸಾಯುವುದಕ್ಕಿಂತ ಓಡಿ ತಪ್ಪಿಸುದೇ ಲೇಸು ಎಂದು ಕಾಲಿಗೆ ಬುದ್ದಿ ಹೇಳಿದರು. ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಕವನ  ರಾತ್ರಿ 9 ಗಂಟೆಗೆ ಮುಕ್ತಾಯಗೊಂಡಿತ್ತು. 27 ಮೈಲುಗಳ ಸತತ ಕಾಲ್ನಡಿಗೆ, ಹಸಿವು ನೀರಡಿಕೆಗಳಿಂದ ವ್ಯಾಕುಲಕೊಂಡಿದ್ದ ಬೆರಳೆಣಿಕೆಯಷ್ಟಿದ್ದ ಸ್ವಾಭಿಮಾನಿ ಮಹಾರ್ ಯೋಧರು ತಮಗಿಂತ 54 ಪಟ್ಟು ಹೆಚ್ಚಿದ್ದಸರ್ವ ಶಸ್ತ್ರಸಜ್ಜಿತ ಪೇಶ್ವೆ ಸೇನೆಯನ್ನು 12 ಗಂಟೆಗಳ ಘೋರ ಕದನದಲ್ಲಿ ದಾರುಣವಾಗಿ ಪರಭಾವಗೊಳಿಸಿ ಪೇಶ್ವೆಗಳ ವೈದಿಕಶಾಹಿ ಆಡಳಿತವನ್ನು ಕೊನೆಗೊಳಿಸಿದರು.

ಮಹಾರ್ ಸೈನಿಕರ ಆ ವೀರಾವೇಶದ ಹೋರಾಟದಲ್ಲಿ ಅದೆಷ್ಟೋ ಶತಶತಮಾನಗಳ ನೋವಿನ  ಆಕ್ರೋಶ ಎದ್ದು ಕಾಣುತ್ತಿತ್ತಂದು ಕ್ಯಾಪ್ಟನ್ ಸ್ಟಂಡನ್ ತನ್ನ ಡೈರಿಯಲ್ಲಿ ದಾಖಲಿಸಿದ್ದಾರೆ. ಈ ಕದನದಲ್ಲಿ ಒಟ್ಟು 50 ಯೋಧರು ವೀರಮರಣವನ್ನಪ್ಪಿದರು. ಹುತಾತ್ಮರಾದವರಲ್ಲಿ 22 ಮಹಾರರು 16 ಮರಾಠರು, 8 ರಜಪೂತರು ಹಾಗೂ 2 ಇತರ ಸಮುದಾಯದವರು ತಲಾ ಒಬ್ಬರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯೋಧರಾಗಿದ್ದಾರೆ. ಹುತಾತ್ಮ ವೀರ ಯೋಧರ ಸ್ಮರಣಾರ್ಥ ಬ್ರಿಟಿಷ್ ಸರಕಾರವು 1822 ರಲ್ಲಿ 64 ಅಡಿ ಎತ್ತರದ ಹುತಾತ್ಮ ಸ್ತಂಭವನ್ನು ಯುದ್ದ ನಡೆದ ಸ್ಥಳವಾದ ಭೀಮಾನದಿ ತೀರದ ಕೋರೆಗಾಂವ್ ನಲ್ಲಿ ಸ್ಥಾಪಿಸಿತು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು 1927 ಜನವರಿ 1ರಂದು ಪ್ರಫಮ ಬಾರಿಗೆ ಈ  ಪವಿತ್ರ ಭೂಮಿಗೆ ಭೇಟಿ ನೀಡಿ ಶೋಷಿತರ ವಿಮೋಚನೆಗಾಗಿ ಹೋರಾಡಿದ ತಮ್ಮ ಪೂರ್ವಜರಿಗೆ ಗೌರವವನ್ನು ಸಲ್ಲಿಸಿದ್ದರು. ಅಲ್ಲಿಂದ  ಮುಂದೆ ಪ್ರತೀ ವರ್ಷವೂ ಬಾಬಾ ಸಾಹೇಬರು  ಜನವರಿ 1 ರಂದು ಬೇಟಿ ನೀಡುತ್ತಿದ್ದರು.




ಈ ಯುದ್ದವನ್ನು  ಜಯಿಸಿದ ಮಹಾರ್ ಯೋಧರು ಬ್ರಿಟಿಷರಲ್ಲಿ ನಿವೇದಿಸಿಕೊಂಡಂತೆ, 1835ರಲ್ಲಿ ಬ್ರಿಟೀಷರು ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಿ,  ಉದ್ಯೋಗದಲ್ಲಿಯೂ ಸರ್ವಸಮುದಾಯಕ್ಕೂ ಪ್ರಾತಿನಿಧ್ಯ ದೊರಕಿಸಿಕೊಟ್ಟರು. ಭೂಮಿಯ ಖರೀದಿ ಹಾಗೂ ಮಾರಾಟಕ್ಕೆ ಶೂದ್ರಾತಿಶೂದ್ರರಿಗೆ ಅವಕಾಶ ನೀಡಲಾಯಿತು. ಆ ಮೂಲಕ ಭಾರತೀಯ ಸಮಾಜದಲ್ಲಿ ಅನೇಕ ಸುಧಾರಣೆಗಳು ಆದವು  ಇದರಿಂದಾಗಿ ಜಾತಿ ಆಧಾರಿತವಾದ ಕಸುಬು ಸಂಕೋಲೆಯಿಂದ  ಹೊರಬಂದು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಶೂದ್ರದಿಶೂದ್ರರಿಗೆ ಸಾಧ್ಯವಾಯಿತ್ತು.

ಜೈಭೀಮ್, ನಮೋಬುದ್ದಾಯಾ…

  • ದೇವಪ್ಪ ಕಾರೇಕ್ಕಾಡ್

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

15-18ವರ್ಷದವರಿಗೆ ಕೊರೊನಾ ಲಸಿಕೆ  : ಇಂದಿನಿಂದಲೇ ನೋಂದಣಿ ಪ್ರಕ್ರಿಯೆ ಆರಂಭ

ಮತಾಂತರದ ಆರೋಪ: ಸೆಂಟ್​ ಪೌಲ್ ಶಾಲೆ ಮುಚ್ಚಲು ನೀಡಿದ್ದ ಆದೇಶಕ್ಕೆ ತಡೆ

ಹಿಜಾಬ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿದ ಪ್ರಿನ್ಸಿಪಾಲ್

ಪುನೀತ್ ರಾಜ್ ಕುಮಾರ್ ಗೆ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದ ಕೆಎಂಎಫ್

ಕ್ರಿಸ್ಮಸ್ ಆಚರಣೆಗೆ ಅಡ್ಡಿ:  ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಮಹಿಳೆಯರು | ವಿಡಿಯೋ ವೈರಲ್

ಇತ್ತೀಚಿನ ಸುದ್ದಿ