ಕೋಟಕ್ ವಿದ್ಯಾರ್ಥಿವೇತನ: ಆಯ್ಕೆಯಾದವರಿಗೆ ಸಿಗಲಿದೆ 1.5 ಲಕ್ಷವರೆಗೆ ಸ್ಕಾಲರ್ಷಿಪ್: ಬೇಗ ಅರ್ಜಿ ಸಲ್ಲಿಸಿ
Kotak Kanya Scholarship 2025 : ಕೋಟಕ್ ಮಹಿಂದ್ರಾ ಗ್ರೂಪ್ ಕಂಪನಿಯು ಕೋಟಕ್ ಎಜುಕೇಶನ್ ಫೌಂಡೇಶನ್ ವತಿಯಿಂದ ” ಕೋಟಕ್ ಕನ್ಯಾ ವಿದ್ಯಾರ್ಥಿ ವೇತನ” ಎಂಬ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ 1.5 ಲಕ್ಷ ರೂಪಾಯಿಯವರೆಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಹಾಗೂ ಕಡಿಮೆ ಆದಾಯ ಹೊಂದಿರುವಂತಹ ಕುಟುಂಬದ ವೃತ್ತಿಪರ ಕೋರ್ಸ್ ಗಳಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ಷಿಪ್ ಸುವರ್ಣ ಅವಕಾಶವಾಗಿದೆ.
ಇತರೆ ಏನೆಲ್ಲಾ ಅರ್ಹತೆ ಹೊಂದಿರಬೇಕು?
12ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 75% ಗಿಂತ ಹೆಚ್ಚು ಅಂಕ ಪಡೆದು ಪಾಸಾಗಿರಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯ ಕುಟುಂಬವಾರ್ಷಿಕ ಆದಾಯವು 6 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವಂತಹ ಅವಶ್ಯಕ ದಾಖಲಾತಿಗಳು :
* 12ನೇ ತರಗತಿಯ ಮಾರ್ಕ್ಸ್ ಕಾರ್ಡ್
* ಜಾತಿ ಮತ್ತು ಆಧಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಕಾಲೇಜು ಪ್ರವೇಶಾತಿ ಪತ್ರ
ಅರ್ಜಿ ಸಲ್ಲಿಸಲಿಕ್ಕೆ ಕೊನೆಯ ದಿನಾಂಕ : 12ನೇ ಜನವರಿ 2025
ಅರ್ಜಿ ಸಲ್ಲಿಸಲಿಕ್ಕೆ ಡೈರೆಕ್ಟ ಲಿಂಕ್ : https://www.buddy4study.com/page/kotak-kanya-scholarship
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: