ಕೋಣೆಗೆ ನುಗ್ಗಿದ ಪ್ರಿಯಕರ, ಪ್ರೇಯಸಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ!

ಕೊಚ್ಚಿ: ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳನ್ನು ಹತ್ಯೆಗೈದ ಪ್ರೇಮಿ, ತಾನೂ ಗುಂಡು ಹಾರಿಸಿಕೊಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಚ್ಚಿಯಿಂದ 35 ಕಿ.ಮೀ. ದೂರದಲ್ಲಿರುವ ಕೋತಮಂಗಲಂ ಬಳಿಯ ನಿಲ್ಲಿಕುಳಿಯಲ್ಲಿ ನಡೆದಿದೆ.
ಈ ಘಟನೆ ಕೇರಳದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. 24 ವರ್ಷ ವಯಸ್ಸಿನ ಮಾನಸ ಪಿ.ವಿ. ಎಂಬಾಕೆ ಕೋತಮಂಗಲಂದ ಇಂದಿರಾ ಗಾಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಡೆಂಟಲ್ ಕೋರ್ಸ್ ಮಾಡುತ್ತಿದ್ದಳು. ಇಲ್ಲಿಗೆ ಸಮೀಪದ ನೆಲ್ಲಿಕುಳಿಯ ರೂಮ್ ವೊಂದರಲ್ಲಿ ತನ್ನ ಸ್ನೇಹಿತೆಯರೊಂದಿಗೆ ವಾಸಿಸುತ್ತಿದ್ದಳು.
ಮೂಲತಃ ಕಣ್ಣೂರಿನವಳಾದ ಮಾನಸ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಳಾಗಿದ್ದಳು. ಈಕೆಗೆ 32 ವರ್ಷ ವಯಸ್ಸಿನ ರಾಖಿಲ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ. ಆ ಬಳಿಕ ಇವರಿಬ್ಬರು ಸ್ನೇಹಿತರಾಗಿದ್ದು, ಸ್ನೇಹ ಪ್ರೀತಿಯಾಗಿ ಬದಲಾಗಿದೆ.
ಒಂದು ತಿಂಗಳ ಹಿಂದೆ, ಮಾನಸ ದಿಢೀರ್ ಆಗಿ ಬದಲಾಗಿದ್ದಾಳೆ. ಲವ್ ಬ್ರೇಕಪ್ ಮಾಡಿಕೊಳ್ಳೋಣ ಎಂದು ರಾಖಿಲ್ ಗೆ ಮಾನಸ ಹೇಳಿದ್ದಾಳೆ. ಇದರಿಂದಾಗಿ ಆತ ತೀವ್ರವಾಗಿ ಕೋಪಗೊಂಡಿದ್ದು, ಮಾನಸ ಜೊತೆಗೆ ಜಗಳವಾಡಿದ್ದಾನೆ. ಆದರೆ ಮಾನಸ, ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು ಎಂದು ಹೇಳಿದ್ದಳು. ಇದಕ್ಕೆ ರಾಖಿಲ್ ಒಪ್ಪದಿದ್ದಾಗ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ರಾಖಿಲ್ ನನ್ನು ಅರೆಸ್ಟ್ ಮಾಡಿದ್ದರು.
ಇದಾದ ಬಳಿಕ ರಾಖಿಲ್ ನ ಪೋಷಕರ ಮನವಿಯ ಮೇರೆಗೆ ಆತನಿಗೆ ಬುದ್ಧಿ ಹೇಳಿ ಪೊಲೀಸರು ಕಳುಹಿಸಿದ್ದರು. ತನ್ನನ್ನು ಬಂಧಿಸಲು ಹೇಳಿದ್ದ ಮಾನಸ ಮೇಲೆ ರಾಖಿಲ್ ಗೆ ತೀವ್ರವಾಗಿ ಸಿಟ್ಟು ಏರಿದ್ದು, ಶುಕ್ರವಾರ ಮಧ್ಯಾಹ್ನ ಮಾನಸ ಇದ್ದ ರೂಮ್ ಗೆ ನೇರವಾಗಿ ರಾಖಿಲ್ ಹೋಗಿದ್ದಾನೆ.
ರೂಮ್ ಗೆ ಹೋದ ತಕ್ಷಣ ಮಾನಸ ಜೊತೆಗೆ ಜಗಳವಾಡಿದ್ದು, ಈ ವೇಳೆ ರೂಮ್ ಮೇಟ್ ಗಳು ಮಾನಸ ಪರವಾಗಿ ನಿಂತಿದ್ದಾರೆ. ಆ ವೇಳೆ ಆತ ಪಿಸ್ತೂಲ್ ಹಿಡಿದು ಅವರನ್ನು ಬೆದರಿಸಿದ್ದಾನೆ. ಬಳಿಕ ಮಾನಸನನ್ನು ಇನ್ನೊಂದು ಕೊಠಡಿಯಲ್ಲಿ ಲಾಕ್ ಮಾಡಿದ್ದು, ಆಕೆಯ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನಷ್ಟು ಸುದ್ದಿಗಳು…
ವಿಚ್ಛೇದನದ ಬಳಿಕ ಜೊತೆಯಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಸಹೋದರಿಯರ ಬರ್ಬರ ಹತ್ಯೆ!
ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟಿ ಶಿಲ್ಪಾಶೆಟ್ಟಿ!
ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಉಪವಾಸ ಸತ್ಯಾಗ್ರಹ!
ಬಿಜೆಪಿಗೆ ಬಂದ 17 ಶಾಸಕರಿಗೆ ಬಿಗ್ ಶಾಕ್ ನೀಡಿದ ಮಾಜಿ ಸಿಎಂ ಯಡಿಯೂರಪ್ಪ!
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾನಿಂದ ನಟಿ ಶೆರ್ಲಿನ್ ಚೋಪ್ರಾಗೆ ಲೈಂಗಿಕ ಕಿರುಕುಳ!