ಕೋಟಿ ಚೆನ್ನಯರ ಮುಂದೆ ಕೊನೆಗೂ ಮಂಡಿಯೂರಿ ಕ್ಷಮೆ ಕೇಳಿದ ಬಿಜೆಪಿ ಮುಖಂಡ - Mahanayaka

ಕೋಟಿ ಚೆನ್ನಯರ ಮುಂದೆ ಕೊನೆಗೂ ಮಂಡಿಯೂರಿ ಕ್ಷಮೆ ಕೇಳಿದ ಬಿಜೆಪಿ ಮುಖಂಡ

09/02/2021

ಮಂಗಳೂರು: ಬಿಲ್ಲವರ ಮೂಲ ಪುರುಷರಾದ ಕೋಟಿ ಚೆನ್ನಯರನ್ನು ಅವಹೇಳನ ಮಾಡಿ ವಿವಾದಕ್ಕೀಡಾಗಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಸಾರ್ವಜನಿಕರ ತೀವ್ರ ವಿರೋಧದ ನಡುವೆಯೇ ಕ್ಷಮೆ ಯಾಚಿಸಿದ್ದಾರೆ.

ಮೂಡುಬಿದಿರೆ ಸಮೀಪದ ಕೆಲ್ಲಪುತ್ತಿಗೆಯ ಪುರಾತನ ಶ್ರೀ ಕ್ಷೇತ್ರ ಭೂತರಾಜಗುಡ್ಡೆಯ ಶ್ರೀ ಧರ್ಮರಸು ದೈವ, ಕುಕ್ಕಿನಂತಾಯ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿ ನೀಡಿ, ತಪ್ಪು ಕಾಣಿಕೆ ಸಲ್ಲಿಸಿ, ದೈವದ ಮುಂದೆ ಅವರು ಕ್ಷಮೆಯಾಚಿಸಿದರು.

ನನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ಬೇಸರವಾಗಿದೆ. ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರೂ ನೊಂದಿದ್ದಾರೆ. ಹಾಗಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಜಗದೀಶ್ ಹೇಳಿದರು.

ತಾನು ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಅವರಲ್ಲಿಯೂ ಕ್ಷಮೆಯಾಚಿಸುತ್ತೇನೆ.  ಕುದ್ರೋಳಿ ಮತ್ತು ಗೆಜ್ಜೆಗಿರಿ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಸಲ್ಲಿಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಬಿಲ್ಲವರ ಮೂಲ ಪುರುಷರಾದ ಕೋಟಿ ಚೆನ್ನಯ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿ ಜಗದೀಶ್ ಅಧಿಕಾರಿ ವಿವಾದಕ್ಕೀಡಾಗಿದ್ದರು. ಇದರಿಂದಾಗಿ ಬಿಲ್ಲವರು ತೀವ್ರವಾಗಿ ಆಕ್ರೋಶಗೊಂಡಿದ್ದರು.

ಇತ್ತೀಚಿನ ಸುದ್ದಿ