ಕೊಟ್ಟಿಗೆಹಾರ: ತ್ಯಾಗ, ಬಲಿದಾನದ ಹಬ್ಬ ಬಕ್ರೀದ್ ಆಚರಣೆ
ಕೊಟ್ಟಿಗೆಹಾರ: ಬಣಕಲ್,ಕೊಟ್ಟಿಗೆಹಾರ, ಚಕ್ಕಮಕ್ಕಿ, ಗಬ್ಗಲ್ ಸೇರಿದಂತೆ ಹಲವೆಡೆ ಮುಸ್ಲಿಂ ಬಾಂದವರು ಮಸೀದಿಗಳಲ್ಲಿ ಸಮಾವೇಶಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ತ್ಯಾಗ ಬಲಿದಾನದ ಹಬ್ಬದ ಶುಭಾಶಯವನ್ನು ಕೋರಿದರು.
ಕೊಟ್ಟಿಗೆಹಾರದ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಧರ್ಮಗುರು ಅಬ್ದುಲ್ ರೆಹಮಾನ್ ಫೈಝಿ ಮಾತನಾಡಿ’ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಕುರಿ ಬಲಿದಾನ ನೀಡಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ದಾನ ಮಾಡುವ ಮೂಲಕ ಹಾಗೂ ಅಲ್ಲಾಹುಗೆ ಬಲಿದಾನ ನೀಡಿದ ಮಾಂಸವನ್ನು ಮೂರು ಪಾಲು ಮಾಡಿ ಒಂದು ಪಾಲು ತಾವು ಬಳಸಿ ಉಳಿದುದನ್ನು ಬಡವರಿಗೆ ಹಂಚಬೇಕು. ಇದರಿಂದ ಈ ಹಬ್ಬ ಭೇಧಬಾವ ಹೊಂದದೇ ಸಮಾನತೆಯಿಂದ ಹಬ್ಬ ಆಚರಿಸಲಾಗುತ್ತದೆ’ ಎಂದರು.
ಅಧ್ಯಕ್ಷ ಮುನೀರ್, ಹಾಜಿ ಟಿ.ಎ.ಖಾದರ್,ಸಿದ್ದಿಕ್, ಹಾಜಿ ಯಾಕೂಬ್, ತನುಕೊಟ್ಟಿಗೆಹಾರ, ಮೊಯಿದ್ದೀನ್, ಮತ್ತಿತರರು ಭಾಗವಹಿಸಿದ್ದರು. ವಿಶೇಷ ಪ್ರಾರ್ಥನೆಯ ಬಳಿಕ ಮುಸ್ಲಿಂ ಬಾಂದವರು ಖಬರ್ ಸ್ತಾನಕ್ಕೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗಾಗಿ ವಿಶೇಷವಾಗಿ ಮುಕ್ತಿ ಸಿಗಲೆಂದು ಪ್ರಾರ್ಥಿಸಿದರು.
ಕೊಟ್ಟಿಗೆಹಾರ ಸುತ್ತಮುತ್ತಲಿನ ಮುಸ್ಲಿಂ ಭಾಂದವರು ಮಸೀದಿಯಲ್ಲಿ ಸೇರಿದ್ದರು. ಬಣಕಲ್ ಜುಮ್ಮಾ ಮಸೀದಿಯಲ್ಲಿ ದರ್ಮಗುರು ಆರೀಸ್ ಮಾತನಾಡಿ ‘ಬಕ್ರೀದ್ ಹಬ್ಬವು ಸಮಾನತೆಯ ಹಬ್ಬವಾಗಿದ್ದು ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲದೇ ತಾವೆಲ್ಲರೂ ಒಂದೇ ಎಂಬ ಭಾವೈಕ್ಯತೆಯಿಂದ ಹಬ್ಬ ಆಚರಿಸಲಾಗುತ್ತದೆ. ಬಡವರಿಗೆ ದಾನ ಮಾಡುವುದೇ ಈ ಹಬ್ಬದ ಮೂಲ ಉದ್ದೇಶವಾಗಿದೆ’ ಎಂದರು.ಹಲವು ಮಸೀದಿಗಳಲ್ಲಿ ಕುರಾನ್ ಪಠಿಸಿ ವಿಶೇಷವಾಗಿ ಪ್ರಾರ್ಥಿಸಿದರು.
ಬಣಕಲ್ ಸುತ್ತಮುತ್ತ ಮಸೀದಿಗಳಲ್ಲೂ ನಮಾಜ್ ಮಾಡಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು.ಕೊಟ್ಟಿಗೆಹಾರ,ಗಬ್ಗಲ್, ಬಣಕಲ್, ಬಗ್ಗಸಗೋಡು,ಬೆಟ್ಟಗೆರೆ ಹಳಿಕೆ ಮಸೀದಿಗಳಲ್ಲೂ ಮುಸ್ಲಿಂ ಮಕ್ಕಳು ಹಾಗೂ ಹಿರಿಯರು ಹೊಸ ಬಟ್ಟೆ ತೊಟ್ಟು ಮಸೀದಿಯಲ್ಲಿ ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw