ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ಗೆ ಹೋಗಿದ್ದ ವೈದ್ಯೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು! - Mahanayaka
3:22 AM Wednesday 11 - December 2024

ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ಗೆ ಹೋಗಿದ್ದ ವೈದ್ಯೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು!

myjio karol fernandes
15/09/2021

ವಿಟ್ಲ: ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ಗೆ ಹೋಗಿದ್ದ ವೈದ್ಯೆಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಅಡ್ಯನಡ್ಕ ವಾರಣಾಶಿಯಲ್ಲಿ ನಡೆದಿದೆ. ಅವರು ಆಯ ತಪ್ಪಿ ಕೆರೆಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

31 ವರ್ಷ ವಯಸ್ಸಿನ ಮೈಜೀ ಕರೋಲ್ ಫೆರ್ನಾಂಡೀಸ್ ಮೃತಪಟ್ಟವರಾಗಿದ್ದಾರೆ. ಇವರ ಕೃಷಿ ಅಧ್ಯನಕ್ಕಾಗಿ ವಾರಣಾಸಿ ಫಾರ್ಮ್ ಹೌಸ್ ಗೆ ಎರಡು ದಿನಗಳ ಹಿಂದೆ ಬಂದಿದ್ದರು. ಮಂಗಳವಾರ ಸಂಜೆ 5:45ರ ವೇಳೆಗೆ  ಹೌಸ್ ನ ಕೃಷಿ ಹೊಂಡದ ಬಳಿಗೆ ಒಬ್ಬರೇ ಹೋಗಿದ್ದರು. ಆದರೆ ಸಾಕಷ್ಟು ಸಮಯವಾದರೂ ಮರಳಿ ಬಂದಿರಲಿಲ್ಲ.

ಮೈಜೀ ಕರೋಲ್ ಫೆರ್ನಾಂಡೀಸ್ ಅವರು ನಾಪತ್ತೆಯಾಗಿರುವ ವಿಚಾರ ತಿಳಿದು ಹುಡುಕಾಡಿದಾಗ ಕೊಳದೊಳಗೆ ಅವರ ಮೃತದೇಹ ಪತ್ತೆಯಾಗಿದೆ. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.

ಮೈಜೀ ಕರೋಲ್ ಫೆರ್ನಾಂಡೀಸ್ ಅವರು ಮಂಗಳೂರಿನ ಪ್ರಶಾಂತನಗರ ನಿವಾಸಿಯಾಗಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ವಿಟ್ಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಫ್ಲೈಓವರ್ ಮೇಲೆ ಬೈಕ್ ಗೆ ಡಿಕ್ಕಿ ಹೊಡೆದ ಕಾರು: 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಬೈಕ್ ಸವಾರರು

ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು

ವರ ನೀರು ತರಲು ಹೋಗಿ ವಾಪಸ್ ಬರುವಷ್ಟರಲ್ಲಿ ನವವಧು ಎಸ್ಕೇಪ್!

ಮಸೀದಿ, ಚರ್ಚ್, ದೇವಸ್ಥಾನ ಅಂತ ಇಲ್ಲ,  ಯಾವುದೇ ಇದ್ದರೂ ತೆರವು ಮಾಡುತ್ತೇವೆ | ರಾಮನಗರ ಡಿಸಿ

ಹಾಸ್ಯ ನಟ ರಾಜು ತಾಳಿಕೋಟೆ ಮೇಲೆಯೂ ಹಲ್ಲೆ: ಆಸ್ಪತ್ರೆಗೆ ದಾಖಲಾಗಿರುವ ನಟ

RPI: ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ ಮತ್ತು ಪರ್ಯಾಯ ರಾಜಕಾರಣ | ತುಮಕೂರು ಜಿಲ್ಲಾ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ

ಆಸ್ತಿಗಾಗಿ ಸಹೋದರರ ಜಗಳ: ಕಟ್ಟಡದ ಮೇಲಿನಿಂದ ಓರ್ವ ಸಹೋದರನನ್ನು ಕೆಳಕ್ಕೆಸೆಯಲು ಯತ್ನ

ಇತ್ತೀಚಿನ ಸುದ್ದಿ