ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇವೆ | ರೈತ ನಾಯಕರಿಂದ ಎಚ್ಚರಿಕೆ
ನವದೆಹಲಿ: ವಿವಾದಿತ ಕೃಷಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಪ್ರಚಾರ ನಡೆಸುತ್ತೇವೆ ಎಂದು ರೈತ ನಾಯಕರು ಬಿಜೆಪಿಯನ್ನು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಸಹಸ್ರಾರು ರೈತರು ಇಂದು ಉತ್ತರ ಪ್ರದೇಶದ ಮುಜಫ್ಫರ್ ನಗರದ ಕಿಸಾನ್ ಮಹಾಪಂಚಾಯತ್ ನಡೆಸಿದ್ದು, ಈ ಸಭೆಯಲ್ಲಿ ಬಿಜೆಪಿಗೆ ನೇರವಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದು, ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ, ಬಿಜೆಪಿಯ ವಿರುದ್ಧ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದವರು ಹೇಳಿದ್ದರು. ಕೇವಲ ಬೆರಳೆಣಿಕೆಯಷ್ಟು ಜನರು ಕಿಸಾನ್ ಮಹಾಪಂಚಾಯತ್ ನಲ್ಲಿ ಭಾಗವಹಿಸುತ್ತಾರೆ ಎಂದು. ಅವರು ನೋಡಲಿ ಇಲ್ಲಿ ನೋಡಲಿ ಎಷ್ಟು ಜನ ಇದ್ದಾರೆಂದು. ಸಂಸತ್ ನಲ್ಲಿರುವವರಿಗೆ ಕೇಳಿಸುವಷ್ಟು ಜೋರಾಗಿ ನಮ್ಮ ಧ್ವನಿಯನ್ನು ಏರಿಸೋಣ ಎಂದು ರೈತ ಮುಖಂಡರು ಕರೆ ನೀಡಿದರು.
ಸರ್ಕಾರ ಈಗಲೇ ಅರ್ಥ ಮಾಡಿಕೊಂಡರೆ ಒಳ್ಳೆಯದು. ಈ ರೀತಿಯ ಸಭೆಗಳನ್ನು ದೇಶದಾದ್ಯಂತ ನಡೆಸುತ್ತೇವೆ. ರೈತರು, ಕಾರ್ಮಿಕರು ಮತ್ತು ಯುವ ಜನರಿಗೆ ಬದುಕಲು ಅವಕಾಶ ನೀಡಬೇಕು. ದೇಶವನ್ನು ಮಾರಲು ನಾವು ಬಿಡುವುದಿಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದರು.
ಇನ್ನಷ್ಟು ಸುದ್ದಿಗಳು…
ಕಾಂಗ್ರೆಸ್ ನವರು ಚಳುವಳಿ ಮಾಡುವಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿಲ್ಲ | ಸಿ.ಟಿ.ರವಿ ಹೇಳಿಕೆ
ಗಣೇಶೋತ್ಸವಕ್ಕೆ ಷರತ್ತು ಬದ್ಧ ಅವಕಾಶ | ಸಂಘಟಕರು ಈ ನಿಯಮಗಳನ್ನು ಪಾಲಿಸಲೇ ಬೇಕು!
ತಡರಾತ್ರಿ ಫೋನ್ ನಲ್ಲಿ ಮಾತನಾಡಿದ್ದಕ್ಕೆ ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ!
ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು!
ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್
ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷ ಎಂ.ಆರ್.ಆಬ್ರಾಹಂರನ್ನು ಭೇಟಿ ಮಾಡಿದ ಐವನ್ ಡಿಸೋಜಾ
ಬೈಕು, ಟಿವಿ, ಫ್ರಿಡ್ಜ್ ಹೊಂದಿದವರ ಪಡಿತರ ಚೀಟಿ ರದ್ದಾಗುವುದೇ? | ಕೊನೆಗೂ ಸ್ಪಷ್ಟನೆ ನೀಡಿದ ಇಲಾಖೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ