ಕೃಷ್ಣನ ಚಕ್ರ, ಟಿಪ್ಪುವಿನ ಸಿಂಹಾಸನ ಮಾರಾಟ ಮಾಡಿದ ಆರೋಪಿ ಅರೆಸ್ಟ್!
ಕೊಚ್ಚಿ: ಪುರಾತನ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದು, ಪುರಾತನ ವಸ್ತುಗಳು ಎಂದು ನಕಲಿ ವಸ್ತುಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿಯನ್ನು ಈತ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕೇರಳದ ಚೆರ್ತಲಾ ಮೂಲದ ಮುನ್ಸನ್ ಮಾವುಂಗಲ್ ಬಂಧಿತ ಆರೋಪಿಯಾಗಿದ್ದಾನೆ. ಈತ ಪುರಾತನ ವಸ್ತುಗಳ ಹೆಸರಿನಲ್ಲಿ ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದ ಬಳಿಕ, ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ತನ್ನ ಬಳಿಯಲ್ಲಿ ರಾಜಮನೆತನದವರ ಪುರಾತನ ವಸ್ತುಗಳಿವೆ ಎಂದು ಯುಎಇ ಮೊದಲಾದ ದೇಶದಲ್ಲಿರುವ ಜನರಿಗೆ ಮೋಸದಿಂದ ನಕಲಿ ವಸ್ತುಗಳನ್ನು ದಾನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ತನ್ನ ಬಳಿಯಲ್ಲಿ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಸಿಂಹಾಸನ ಇದೆ. ಕೇರಳದ ಮೋಶೆಯ ರಾಜದಂಡ ಇದೆ. ಕೃಷ್ಣ ಬೆಣ್ಣೆ ತೆಗೆಯುತ್ತಿದ್ದ ಕೋಲು ಇದೆ, ಕೃಷ್ಣನ ಚಕ್ರಾಯುಧ ಇದೆ ಎಂದು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿಗೆ ಅದನ್ನು ಮಾಡಿದ್ದಾನೆ. ಆದರೆ ಇವೆಲ್ಲವೂ ನಕಲಿ ವಸ್ತುಗಳಾಗಿವೆ ಎಂದು ತಿಳಿದು ಬಂದಿದೆ.
ವಸ್ತುಗಳನ್ನು ನಕಲಿಯಾಗಿ ತಯಾರಿಸುವುದು ಮಾತ್ರವಲ್ಲ, ತನ್ನಲ್ಲಿರುವ ವಸ್ತುಗಳಿಗೆ ಪುರಾಣದ ಕಥೆಗಳನ್ನು ಕಟ್ಟಿ ಮೋಸ ಮಾಡುವುದರಲ್ಲೂ ಆರೋಪಿ ನಿಪುಣನಾಗಿದ್ದ ಎಂದು ಹೇಳಲಾಗಿದೆ. ಇನ್ನೂ ಈತ ಹೇಳಿರುವ ಕಥೆಗಳು ಇದೀಗ ಪೊಲೀಸರಿಗೂ ತಲೆ ನೋವುಂಟು ಮಾಡಿದೆ. ಈತ ಹೇಳಿದ್ದರಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಪೊಲೀಸರು ಕಂಡು ಹಿಡಿಯುವಂತಾಗಿದೆ. ಆರೋಪಿ ಕಾರ್ಯಾಚರಿಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಬಳಿಕ ಇದೀಗ ಪುರತತ್ವ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಪ್ರತ್ಯೇಕ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಹೃದಯಾಘಾತವಾಗುವುದಕ್ಕೂ ಮೊದಲು ಕಂಡು ಬರುವ ಲಕ್ಷಣಗಳೇನು?
ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳನ್ನು ತಡೆದು ಸಂಘಪರಿವಾರದ ಸದಸ್ಯರಿಂದ ಹಲ್ಲೆ
ಕಡಬ: ಯುವತಿಯ ಮೇಲೆ ಅತ್ಯಾಚಾರ, ಗರ್ಭಪಾತ | ಕಾನ್ ಸ್ಟೇಬಲ್ ಅರೆಸ್ಟ್
ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ | ನರ್ಸಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಸ್ವಇಚ್ಛೆಯಿಂದ ಮಾತ್ರ ಮತಾಂತರವಾಗಲು ಕಾನೂನಿನಲ್ಲಿ ಅವಕಾಶವಿದೆ | ಸಿಎಂ ಬಸವರಾಜ ಬೊಮ್ಮಾಯಿ
ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವೆ ಜೊಲ್ಲೆ ವಿರುದ್ಧ ತಿರುಗಿ ಬಿದ್ದ ಗೋಮಾತೆ | ಸಚಿವರಿಗೆ ತಿವಿಯಲು ಯತ್ನ
ಚೆಕಪ್ ಗೆ ಹೋದ ಮಹಿಳೆಯ ವಸ್ತ್ರ ಕಳಚಿ ಲೈಂಗಿಕ ಕಿರುಕುಳ | ವೈದ್ಯ ಅರೆಸ್ಟ್