ಇತಿಹಾಸದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ: ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಕೃಷ್ಣಭೈರೇಗೌಡ ಪ್ರತಿಕ್ರಿಯೆ
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಇಡೀ ಪ್ರಪಂಚದ ಇತಿಹಾಸದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಇವರ ಮನೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೂ ಇವರ ತಂದೆ, ತಾಯಿ ಏನು ಮಾಡುತ್ತಿದ್ದರು? ಓಟ್ ಹಾಕಿದ ಜನರಿಗೆ ಮಾಡಿದ ದೊಡ್ಡ ದ್ರೋಹ ಇದು, ರಾಜ್ಯದ ಜನರಿಗೆ ಉತ್ತರ ಕೊಡಿ ಎಂದು ಕೃಷ್ಣಭೈರೇಗೌಡ ಒತ್ತಾಯಿಸಿದ್ದಾರೆ.
ಈ ಪ್ರಕರಣ ಮೇಲ್ನೋಟಕ್ಕೆ ಪ್ರಜ್ವಲ್ ರೇವಣ್ಣ ಅವರದ್ದೇ ಎಂದು ತಿಳಿದು ಬರುತ್ತಿದ್ದು ತನಿಖೆ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಈಗಾಗಲೇ ನಮ್ಮ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ನಡೆಸಲು ತೀರ್ಮಾನಿಸಿದ್ದು ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಇಷ್ಟು ದಿನ ಇವರ ಮನೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೂ ಇವರ ತಂದೆ ರೇವಣ್ಣ, ತಾಯಿ ಭವಾನಿ ಒಬ್ಬ ಹೆಣ್ಣಾಗಿ ಮತ್ತೊಂದು ಹೆಣ್ಣಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಾಣ ಕುರುಡುತನ ಅನುಸರಿಸುತ್ತಿದ್ದರಾ? ಅಮಾಯಕ ಹೆಣ್ಣು ಮಕ್ಕಳ ಬಡತನವನ್ನ, ಕಷ್ಟತನವನ್ನ ಲಾಭ ಮಾಡಿಕೊಂಡು ದೌರ್ಜನ್ಯ ನಡೆಸುತ್ತಿದ್ದೀರಿ, ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರು ಮಗನಿಗೆ ಬೆಂಬಲ ನೀಡುವ ಮೂಲಕ ಈ ಕೃತ್ಯದಲ್ಲಿ ಭಾಗಿಯಾಗಿದ್ದೀರಿ ಇದಕ್ಕೆಲ್ಲಾ ರಾಜ್ಯದ ಜನಕ್ಕೆ ನೀವು ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿಯವರು ಚುನಾವಣೆ ಬಂದರೆ ಧರ್ಮ ಎಂದು ಮಾತನಾಡುತ್ತಾರೆ, ಇವತ್ತು ಇತಿಹಾಸದಲ್ಲೇ ಅತಿ ದೊಡ್ಡ ಅಧರ್ಮದ ಕೆಲಸ ನಡೆದಿದೆ, ದ್ರೌಪದಿಗೆ ವಸ್ತ್ರಾಪಹರಣ ಮಾಡಿದ ಹಾಗೆ ಇವತ್ತು ಹಾಸನ ಜಿಲ್ಲೆಯ ಸುಮಾರು ಮಹಿಳೆಯರ ವಸ್ತ್ರಾಪಹರಣದ ಕೆಲಸ ನಡೆದಿದೆ. ರಾಮನ ಬಗ್ಗೆ ಕೃಷ್ಣನ ಬಗ್ಗೆ ಮಾತನಾಡುವ ನೀವು ರಾಮಾಯಣ, ಮಹಾಭಾರತವನ್ನು ವೋಟ್ ಗೆ ಬಳಸಿಕೊಳ್ಳುವ ನಿರ್ಲಜ್ಜ ಬಿಜೆಪಿಯವರು ಇವತ್ತು ಇಂತಹ ಲೈಂಗಿಕ ಹಗರಣ ಕುಟುಂಬದ ಜೊತೆಗೆ ಸಂಸಾರ ನಡೆಸಿ, ಒಬ್ಬರಿಗೆ ಒಬ್ಬರು ಆಲಿಂಗನ ಮಾಡ್ಕೊಂಡು ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದೀರಿ ಇದು ಬಿಜೆಪಿ ಮತ್ತು ಜೆಡಿಎಸ್ಗೆ ನಾಚಿಕೆಗೇಡಿನ ಕೆಲಸ ಎಂದು ಕಿಡಿಕಾರಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth