ಮತ್ತೆ ಕೃಷ್ಣನ ತಂತ್ರಗಾರಿಗೆ ತೋರುತ್ತಾರಾ ರಮೇಶ್ ಜಾರಕಿಹೊಳಿ?
ಬೆಂಗಳೂರು: ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಜಾರಿಗೆ ಬಂದರೂ ಅತೃಪ್ತರಿಗೆ ಇನ್ನೂ ತೃಪ್ತಿಯಾಗಿಲ್ಲ. ಬಿಜೆಪಿಯ ಹಿರಿಯ ನಾಯಕರು ಕೃಷ್ಣನ ತಂತ್ರಗಾರಿಕೆ ಹೈಕಮಾಂಡ್ ಮಾಡ್ತಿದೆ ಎಂದು ಹೇಳಿದರೂ ರಾಜ್ಯದೊಳಗೆ ಕೃಷ್ಣನನ್ನೂ ಮೀರಿಸಿದ ತಂತ್ರಗಾರಿಕೆ ಒಳಗಿಂದೊಳಗೆ ನಡೆಯುತ್ತಿದೆ. ಸರ್ಕಾರ ಬೀಳಿಸೋದ್ರಲ್ಲಿ ಎತ್ತಿದ ಕೈ ಎಂದು ಸಾಬೀತಾಗಿರುವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಇದೀಗ ಮತ್ತೆ ಅತೃಪ್ತರ ಮೀಟಿಂಗ್ ನಡೆಯುತ್ತಿದೆ ಎನ್ನುವ ಮಾಹಿತಿಯೊಂದು ಇದೀಗ ದೊರೆತಿದೆ.
ಗುರುವಾರ ತಡರಾತ್ರಿ ಹಲವು ಶಾಸಕರು ಮಂತ್ರಿಗಿರಿ ಕೈತಪ್ಪಿದ ಹಿನ್ನೆಲೆಯಲ್ಲಿ ಜೊತೆ ಸೇರಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಜೆಪಿಗೆ ಕರೆತಂದು ಈಗ ನಮ್ಮನ್ನು ಹೊರಗಿಡಲಾಗಿದೆ. ಇದರಿಂದಾಗಿ ನಮಗೆ ಅನ್ಯಾಯ ಆಗಿದೆ ಎಂದು ಶ್ರೀಮಂತ ಪಾಟೀಲ್ ಹಾಗೂ ಆರ್.ಶಂಕರ್ ರಮೇಶ್ ಜಾರಕಿಹೊಳಿಯನ್ನು ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ.
ವರದಿಯ ಪ್ರಕಾರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರಾಜೂಗೌಡ, ಅರವಿಂದ್ ಬೆಲ್ಲದ್, ಮಾಜಿ ಸಚಿವ ಪ್ರತಾಪ ಗೌಡ ಪಾಟೀಲ್, ಶ್ರೀಮಂತ ಪಾಟೀಲ, ಮಹೇಶ್ ಕುಮಠಳ್ಳಿ ಭಾಗವಹಿಸಿದ್ದರು. ರಮೇಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಗಂಭೀರವಾದ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಖಾಲಿ ಇರುವ ಸಚಿವ ಸ್ಥಾನ ನಮಗೆ ನೀಡಬೇಕು ಎಂದು ಅತೃಪ್ತರು ಒತ್ತಾಯಿಸಿದ್ದಾರೆ. ಇನ್ನೂ ಅತೃಪ್ತರ ಸಭೆ ನಡೆದಿರುವ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅತೃಪ್ತರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಸಚಿವ ಸ್ಥಾನ ದೊರಕದೇ ಇದ್ದರೆ, ಅತೃಪ್ತರು ರಾಜೀನಾಮೆ ನೀಡುವ ಸಾಧ್ಯತೆಗಳು ಕೂಡ ಹೆಚ್ಚಿದೆ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳು…
ಶಾಕಿಂಗ್ ನ್ಯೂಸ್: ಬ್ಲೂಟೂತ್ ಹೆಡ್ ಫೋನ್ ಸ್ಫೋಟ ಯುವಕ ದಾರುಣ ಸಾವು
ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್
ವಿಡಿಯೋ ಕಾಲ್ ನಲ್ಲೇ ಕೊಲೆಗೆ ಟ್ರೈನಿಂಗ್ ನೀಡಿದ ಪ್ರಿಯಕರ: ಅಮ್ಮನನ್ನೇ ಕೊಂದ ಬಾಲಕಿ