JCI: “ಕ್ಷಯ ಮುಕ್ತ ಭಾರತ” ಜಾಗೃತಿ ಮೂಡಿಸಲಿರುವ ‘ಹೆಜ್ಜೆ ಬದಲಾದಾಗ’ ಕಿರುಚಿತ್ರ
ಸುಳ್ಯ: ಪುರಾತನ ಕಾಯಿಲೆ ಎಂದೇ ಕರೆಯುವ ಕ್ಷಯರೋಗದಿಂದ ಇನ್ನೂ ಭಾರತ ಮುಕ್ತವಾಗಿಲ್ಲ. ಈ ಕಾಯಿಲೆಯು ಶೇ.90ರಷ್ಟು ಶ್ವಾಸಕೋಶಕ್ಕೆ ಬರುತ್ತದೆ. ಶೇ.10ರಷ್ಟು ದೇಹದ ಉಳಿದ ಭಾಗಗಳಿಗೆ ಬರುತ್ತದೆ. ಗಾಳಿಯ ಮೂಲಕ ತುಂತುರು ರೂಪದಲ್ಲಿ ಈ ಕಾಯಿಲೆಯು ಹರಡುತ್ತದೆ.
ವಿಶ್ವಸಂಸ್ಥೆಯ ಪ್ರಕಾರ ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು 26.7 ಲಕ್ಷ ಕ್ಷಯ ರೋಗ ಪ್ರಕರಣಗಳು ಕಂಡು ಬರುತ್ತಿದ್ದು, ವರ್ಷಕ್ಕೆ 73,000ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಜಗತ್ತಿನ ನಾಲ್ಕನೇ ಒಂದು ಭಾಗದಷ್ಟು ಕ್ಷಯ ರೋಗಿಗಳು ಭಾರತದಲ್ಲಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಕ್ಷಯ ರೋಗದ ವಿರುದ್ಧ ಸಮರ ಸಾರುತ್ತಿದೆ. ಕ್ಷಯ ಮುಕ್ತ ಭಾರತ-2025 ಮಾಡಲಿ ಪ್ರಧಾನಿಯವರು ಪಣತೊಟ್ಟಿದ್ದಾರೆ.
ಪ್ರಧಾನಿಯವರ ಈ ಯೋಜನೆಯ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶದ ಜೆಸಿಐ ಬೆಳ್ಳಾರೆ ಮತ್ತು ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯವು ಕಿರುಚಿತ್ರವನ್ನು ನಿರ್ಮಿಸಿದ್ದು, “ಹೆಜ್ಜೆ ಬದಲಾದಾಗ” ಬದಲಾವಣೆ ನನ್ನಿಂದಲೇ… ಎನ್ನುವ ಸಂದೇಶವನ್ನು ಈ ಕಿರುಚಿತ್ರ ಸಾರುತ್ತಿದೆ. ಈ ಕಿರುಚಿತ್ರ ವಿವಿಧ ವೆಬ್ ಸೈಟ್ ಗಳಲ್ಲಿ ಪ್ರಸಾರವಾಗಲಿದೆ.
ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿ ಅವರ ಪರಿಕಲ್ಪನೆಯಲ್ಲಿ ಜೆಸಿಐ ಬೆಳ್ಳಾರೆಯ ಘಟಕ ಅಧ್ಯಕ್ಷ ಪದ್ಯನಾಭ ಕಲಾಸುಮ ನೇತೃತ್ವದಲ್ಲಿ ಕ್ಷಯ ಮುಕ್ತ ಭಾರತಗೊಳಿಸುವ ಒಂದು ದಿಟ್ಟ ಹೆಜ್ಜೆ ಸುಳ್ಯದಿಂದ ಆರಂಭಗೊಳ್ಳಲಿದೆ.
ಈ ಕಿರುಚಿತ್ರವನ್ನು ಖ್ಯಾತ ನಾಟಕಕಾರ ಕೃಷ್ಣಪ್ಪಬಂಬಿಲ ಅವರು ನಿರ್ದೇಶನ ಮಾಡಿದ್ದಾರೆ. ಜನಪ್ರಿಯ ಕಥೆಗಾರ ಸತೀಶ್ ಕಕ್ಕೆಪದವು ಕಥೆ ಬರೆದಿದ್ದಾರೆ. ಕ್ಯಾಮರಾಮ್ಯಾನ್ ಆಗಿ ಅಶ್ವಿನ್ ಚೆಂಡ್ತಿಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ. ಛಾಯಾಗ್ರಹಣವನ್ನು ಪ್ರವೀಣ್ ಕುಕ್ಕೆ ಮಾಡಿದ್ದಾರೆ. ಶಿವರಾಮ್ ಕಲ್ಮಡ್ಕ ಮೇಕಪ್ ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಟ ನಟಿಯರಾಗಿ ಬೆಳ್ಳಾರೆ ಜೆಸಿಐ ಮತ್ತು ಜೂನಿಯರ್ ಜೆಸಿಯ ಹಳ್ಳಿಯ ಯುವ ಪ್ರತಿಭೆಗಳು ನಟಿಸಿದ್ದಾರೆ. 10 ದಿನಗಳ ಕಾಲ ರಂಗ ತರಬೇತಿ ಪಡೆದು ಇವರೆಲ್ಲರೂ ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ಲಸಿಕಾ ಅಭಿಯಾನದ ವೇಳೆ ಆರೋಗ್ಯ ಸಿಬ್ಬಂದಿಯ ಮೇಲೆ ಮಹಿಳೆಯಿಂದ ಹಲ್ಲೆ!
ಪ್ರಧಾನಿ ಮೋದಿಗೆ ಪರ್ಯಾಯ ರಾಹುಲ್ ಅಲ್ಲ, ಮಮತಾ ಬ್ಯಾನರ್ಜಿ | ಜಾಗೋ ಬಾಂಗ್ಲಾ ವರದಿ
ಮಕ್ಕಳಲ್ಲಿ ಹೆಚ್ಚುತ್ತಿದೆ ವೈರಲ್ ಜ್ವರ: ಪೋಷಕರಲ್ಲಿ ಆತಂಕ‘
ಸಿಲಿಕಾನ್ ಸಿಟಿ ಫ್ಲೈಓವರ್ ನಲ್ಲಿ ಆಕ್ಸಿಡೆಂಡ್ ಆದ ಜಾಗದಲ್ಲಿಯೇ ಕಾರು ನಿಲ್ಲಿಸಿ ಯುವಕ, ಯುವತಿಯರ ಡಾನ್ಸ್!
4.3 ಕೋಟಿ ವರ್ಷಗಳ ಹಿಂದಿನ ನಾಲ್ಕು ಕಾಲಿನ ಬೃಹತ್ ತಿಮಿಂಗಲ ಪತ್ತೆ!