ಆಂಧ್ರಪ್ರದೇಶದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕ, ನಿರ್ವಾಹಕನಿಗೆ ಮಾರಣಾಂತಿಕ ಹಲ್ಲೆ!

ksrct
04/06/2022

ವಿಜಯಪುರ: ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಕೆಎಸ್ಸಾರ್ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಮತ್ತು ನಿರ್ವಾಹಕ ಜೆಡಿ ಮಾದರ್ ಹಲ್ಲೆಗೊಳಗಾದವರಾಗಿದ್ದಾರೆ. ಬಸ್ ಸಿಬ್ಬಂದಿಗೆ ಹಲ್ಲೆ ನಡೆಸಿರುವುದೇ ಅಲ್ಲದೇ ವಿಜಯಪುರ ಡಿಪೋಗೆ ಸೇರಿದ ಈ ಬಸ್ ನ ಕಿಟಕಿ ಗಾಜುಗಳನ್ನು ಕೂಡ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ.

ಜೂನ್ 2ರ ರಾತ್ರಿ ಈ ಘಟನೆ ನಡೆದಿದ್ದು, ಶ್ರೀಶೈದ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿ ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದ ಸಂದರ್ಭದಲ್ಲಿ ಪುಂಡರು ಏಕಾಏಕಿ ದಾಳಿ ನಡೆಸಿದ್ದು, ಕನ್ನಡಿಗರ ಬಗ್ಗೆ ಕೀಳಾಗಿ ನಿಂದಿಸಿ, ಅಶ್ಲೀಲ ಪದಗಳನ್ನು ಬಳಸಿ ಬೈದಿದ್ದು, ಬಳಿಕ ಹಲ್ಲೆ ನಡೆಸಿದ್ದಾರೆ.

ಬಸ್ ಚಾಲಕನ ಮುಖ ಹಾಗೂ ಕಾಲಿಗೆ ಭಾರೀ ಏಟು ಬಿದ್ದಿದ್ದು, ಚಾಲಕನ ಚೀರಾಟ ಕೇಳಿ ನಿರ್ವಾಹಕ ಓಡಿ ಬಂದಿದ್ದು, ಈ ವೇಳೆ ನಿರ್ವಾಹಕನಿಗೂ ಹಲ್ಲೆ ನಡೆಸಲಾಗಿದೆ. ಗಲಾಟೆ ಕೇಳಿ ಸಾರ್ವಜನಿಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಪುಂಡರು ಪರಾರಿಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಕ್ಕಳು ಅಳುತ್ತಾರೆ ಎಂದು ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಾಯಿ!:  ಬೆಚ್ಚಿ ಬೀಳಿಸುವಂತಿದೆ ಈ ಘಟನೆ

ಅನಿಲ ಸೋರಿಕೆ: ಪ್ರಜ್ಞೆ ಕಳೆದುಕೊಂಡು ಬಿದ್ದ ಕಾರ್ಮಿಕರು: 30 ಮಂದಿ ಆಸ್ಪತ್ರೆಗೆ ದಾಖಲು

ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನ: ಸಿಸಿ ಟಿವಿ ದೃಶ್ಯಗಳಿಂದ ಸಿಕ್ಕಿ ಬಿದ್ದ ಕಾಮುಕ

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್:  ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಸಾವು

ಇತ್ತೀಚಿನ ಸುದ್ದಿ

Exit mobile version